ಮೇಷ ಮನಸ್ಸಿನಲ್ಲಿನ ದ್ವಂದ್ವದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟಪಡುವಿರಿ. ಸಂಗೀತ ಮತ್ತು ಲಲಿತಕಲೆಗಳನ್ನು ಕಲಿತಿರುವವರಿಗೆ ಬೇಡಿಕೆ ಹೆಚ್ಚುತ್ತದೆ. ಹಿರಿಯರ ಸಲಹೆ ನಿಮಗೆ ಅತ್ಯಮೂಲ್ಯ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ಗೆಳೆಯರ ಕೆಲಸಗಳಿಗೆ ಹೆಚ್ಚು ಸಹಕಾರ ನೀಡುವಿರಿ.
ವೃಷಭ
ಹಣಕಾಸಿನ ಅನುಕೂಲವಿರುತ್ತದೆ. ಕಾನೂನಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ನಿಮಗೆ ಜಯ ಇರುತ್ತದೆ. ಮಾದಕ ವಸ್ತುಗಳ ಅಭ್ಯಾಸವಿದ್ದವರಿಗೆ ಸಾಕಷ್ಟು ತೊಂದರೆ ಇರುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ದೊರಕುವ ಸಾಧ್ಯತೆ ಇದೆ. ಈಗ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ.
ಮಿಥುನ
ನಿಮ್ಮ ನಡವಳಿಕೆಯು ಸಂಪೂರ್ಣವಾಗಿ ವ್ಯಾವಹಾರಿಕವಾಗಿರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಮಕ್ಕಳಿಗಾಗಿ ಹೆಚ್ಚು ಹಣ ವ್ಯಯವಾಗುತ್ತದೆ. ಶೀತಬಾಧೆ ಇರುವವರಿಗೆ ಅದರ ತೀವ್ರತೆ ಹೆಚ್ಚಬಹುದು. ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಕೆಲವೊಂದು ವ್ಯವಹಾರದ ಮಾತುಕತೆಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯೆ ದೊರೆತು ಸಂತಸವಾಗುತ್ತದೆ.
ಕಟಕ
ಸರ್ಕಾರಿ ಮಟ್ಟದ ಹಣಕಾಸಿನ ವ್ಯವಹಾರಗಳು ಸರಾಗವಾಗಿ ಆಗುತ್ತವೆ. ಮನೆಯವರೊಂದಿಗೆ ಶುಭಕಾರ್ಯಕ್ಕೆ ಪ್ರಯಾಣ ಮಾಡಬೇಕಾದ ಸಾಧ್ಯತೆ ಇದೆ. ಬಹಳಷ್ಟು ಚುರುಕಾಗಿ ಓಡಾಡಿ ವ್ಯವಹಾರ ವಿಸ್ತರಣೆಯನ್ನು ಮಾಡುವಿರಿ. ಹೊಸ ಆಸ್ತಿಕೊಳ್ಳಲು ಈಗ ಸಕಾಲವಲ್ಲ. ಮಕ್ಕಳ ಅಭಿವೃದ್ಧಿಯ ವಿಷಯದಲ್ಲಿ ಈಗ ನೆಮ್ಮದಿ ಬರುತ್ತದೆ. ಸಂಗಾತಿಯ ಜೊತೆ ಕಾವೇರಿದ ಮಾತುಗಳಾದರೂ ಸ್ವಲ್ಪಹೊತ್ತಿನಲ್ಲೇ ತಿಳಿಯಾಗುತ್ತದೆ.
ಸಿಂಹ
ತಮ್ಮ ಉತ್ತಮ ಸಾಧನೆಯನ್ನು ತೋರಿಸಲು ಕ್ರೀಡಾಪಟುಗಳಿಗೆ ಅವಕಾಶ ದೊರೆಯುತ್ತದೆ. ಹಣದ ಹರಿವು ತೃಪ್ತಿಕರವಾಗಿರುತ್ತದೆ. ಈಗ ಸ್ಥಿರಾಸ್ತಿಯನ್ನು ಮಾಡುವ ವಿಚಾರದಲ್ಲಿ ಶುಭಸೂಚನೆಗಳು ದೊರೆಯುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದ ಅನಿವಾರ್ಯವಿದೆ. ಮೂಳೆ ಸಂಬಂಧಿ ಕಾಯಿಲೆ ಇರುವವರು ಎಚ್ಚರ ವಹಿಸಿರಿ.
ಕನ್ಯಾ
ಸಂಗಾತಿ ಕಡೆಯಿಂದ ನಿಮ್ಮ ವ್ಯವಹಾರಗಳಿಗೆ ಅನುಕೂಲಕರ ರೀತಿಯಲ್ಲಿ ಬಂಡವಾಳ ಹರಿದು ಬರುತ್ತದೆ. ಉದ್ಯೋಗದ ನಿಮಿತ್ತ ತರಬೇತಿಯಲ್ಲಿ ಭಾಗವಹಿಸುವಿರಿ. ದೂರ ದೇಶದಲ್ಲಿರುವ ಮಕ್ಕಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನೆರೆಹೊರೆಯವರೊಡನೆ ಸಂಬಂಧ ವ್ಯತ್ಯಾಸಗೊಳ್ಳಬಹುದು. ಬರಬೇಕಾಗಿದ್ದ ಹಣ ಬರುವುದು ನಿಧಾನವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ.
ತುಲಾ
ಮಧ್ಯಮವರ್ಗದವರಿಗೆ ಬಯಸುತ್ತಿದ್ದ ಆರ್ಥಿಕ ಅನುಕೂಲಗಳು ನಿಧಾನವಾಗಿ ದೊರೆಯುವ ಸಾಧ್ಯತೆಗಳಿವೆ. ಉದಾಸೀನ ಗತಿಯ ನಡವಳಿಕೆ ಇರುತ್ತದೆ. ನಿಶ್ಚಿತ ಗುರಿಯನ್ನು ತಲುಪಲು ಹೆಚ್ಚು ಶ್ರಮ ಹಾಕಲೇಬೇಕಾದ ಅನಿವಾರ್ಯವಿದೆ. ವ್ಯಾಪಾರಿಗಳಿಗೆ ವಸ್ತುಗಳ ಬೇಡಿಕೆ ಹೆಚ್ಚಾಗಿ ಧನಲಾಭಬರುತ್ತದೆ. ಸಂಗಾತಿ
ಅಧಿಕ ಖರ್ಚು ಚಿಂತೆಗೀಡು ಮಾಡಬಹುದು.
ವೃಶ್ಚಿಕ
ಗೃಹ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ವೃದ್ಧಿಸಿ ಲಾಭ ಬರುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಪಿತ್ರಾರ್ಜಿತ ಆಸ್ತಿ ಈಗ ಒದಗುವ ಸಂದರ್ಭವಿದೆ. ನಿಮ್ಮ ಶತ್ರುಗಳನ್ನು ಪರಾಕ್ರಮದಿಂದ ಎದುರಿಸಿ ಅವರ ಸದ್ದಡಗಿಸುವಿರಿ. ಆಭರಣಗಳ ಮೇಲೆ ಕುಸರಿ ಕಲೆಗಳನ್ನು ಮಾಡುವ ಕಲೆಗಾರರಿಗೆ ಬೇಡಿಕೆ ಹೆಚ್ಚುತ್ತದೆ. ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸವಿದ್ದು ಹೆಚ್ಚು ಸಂಪಾದನೆಯಾಗುತ್ತದೆ.
ಧನು
ಸಾವಯವ ಕೃಷಿ ಮಾಡುವವರಿಗೆ ಮತ್ತು ಅವರು ಬೆಳೆದ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ಉದ್ದಿಮೆಯನ್ನು ಸ್ಥಾಪಿಸಬೇಕೆನ್ನುವವರಿಗೆ ಈಗ ಸರ್ಕಾರದ ಕಡೆಯಿಂದ ಸೂಕ್ತ ಸೂಚನೆ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇದ್ದರೂ ಅದರ ನಿರ್ವಹಣೆ ಸರಿಯಾಗಿ ಮಾಡುವಿರಿ. ಸ್ಥಿರಾಸ್ತಿಯನ್ನು ಮಾರಾಟ ಮಾಡಿಸುವ ಮಧ್ಯವರ್ತಿಗಳಿಗೆ ಉತ್ತಮ ಕಮಿಷನ್ ಹಣ ದೊರೆಯುತ್ತದೆ
ಮಕರ
ಕೆಲವು ರಾಜಕಾರಣಿಗಳು ತಮ್ಮ ನಾಯಕರ ವಿರುದ್ಧ ತಿರುಗಿಬಿದ್ದು ಸೂಕ್ತ ಸ್ಥಾನವನ್ನು ಪಡೆದುಕೊಳ್ಳುವರು. ಕಟ್ಟಡ ಸಾಮಗ್ರಿಗಳನ್ನು ಸಗಟು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸಹಕಾರಿ ರಂಗವನ್ನು ಮುನ್ನಡೆಸುತ್ತಿರುವವರಿಗೆ ಸ್ಥಾನ ಹಾಗೂ ಗೌರವ ದೊರೆಯುತ್ತದೆ. ನಿಮ್ಮದೇ ಉತ್ತಮ ಕೆಲಸದ ಬಗ್ಗೆ ಕುಹಕ ಮಾಡಿದವರು ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸುವರು
ಕುಂಭ
ಧನಾದಾಯವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಒಂದೆಡೆ ಸಾಲಪಡೆದು ಇತರ ಸಾಲಗಳನ್ನು ತೀರಿಸಬಹುದು. ಅನಗತ್ಯವಾಗಿ ಆಸ್ತಿ ಖರೀದಿಸಲು ಮುಂದಾಗಬೇಡಿ. ಈ ಕಾರ್ಯಕ್ಕೆ ಇದು ಸಕಾಲವಲ್ಲ. ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ದೊರೆತು ಅಭಿವೃದ್ಧಿಯತ್ತ ಮುನ್ನಡೆಯುವರು. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಮಾಡುವ ಅವಕಾಶ ಸಿಗುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ.
ಮೀನ
ಅತಿಯಾದ ಆತ್ಮಗೌರವ ನಿಮ್ಮನ್ನು ಆವರಿಸಬಹುದು. ಮಾತನಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಿರಿ. ಇಲ್ಲವಾದಲ್ಲಿ ನಿಮ್ಮ ಮಾತು ನಿಮಗೆ ತಿರುಗುಬಾಣವಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದೇಶಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರದಲ್ಲಿ ಕಾನೂನು ತೊಡಕುಗಳು ಆಗಬಹುದು. ಹೆಣ್ಣುಮಕ್ಕಳ ವಿದ್ಯಾಭ್ಯಾಸವು ನಿರೀಕ್ಷೆಗಿಂತ ಹೆಚ್ಚಿಗೆ ಇರುತ್ತದೆ.
















