Coastal Bulletin

ಮೇಷ : ರಾಜಕಾರಣಿಗಳು ಯಾವುದೇ ಮುಂದಾಲೋಚನೆ ಇಲ್ಲದೆ ಭರವಸೆಗಳನ್ನು ನೀಡಬೇಡಿ, ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕುವಿರಿ. ಹೊಸದೊಂದು ವಿದ್ಯೆಯನ್ನು ಕಲಿಯುವ ಉತ್ಸಾಹ ನಿಮ್ಮಲ್ಲಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಕೃಷಿಕರಿಗೆ ಕೃಷಿ ಕ್ಷೇತ್ರದಲ್ಲಿ ಚೇತರಿಕೆ ಕಂಡು ತುಸು ನೆಮ್ಮದಿ ಮೂಡುತ್ತದೆ. ಆಸ್ತಿ ವಿವಾದಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ.

ವೃಷಭ : ವಿಮಾ ಸಲಹೆಗಾರರಿಗೆ ಹೆಚ್ಚು ಯಶಸ್ಸು ಕಂಡುಬರುವ ಸಾಧ್ಯತೆ ಇದೆ. ಈ ಕಾರ್ಯಕ್ಕಾಗಿ ದೂರ ಪ್ರಯಾಣ ಮಾಡಿದರೂ ನಷ್ಟವೇನಿಲ್ಲ. ಈ ಹಿಂದೆ ಬಂಗಾರದಲ್ಲಿ ಹೂಡಿಕೆ ಮಾಡಿದ್ದವರಿಗೆ ಹೆಚ್ಚಿನ ಲಾಭ ದೊರಕುತ್ತದೆ. ಹೂವಿನ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ನಡೆದು ಹೆಚ್ಚು ಲಾಭ ಬರುತ್ತದೆ. ಉದ್ದಿಮೆದಾರರು ಈಗಿರುವ ವಸ್ತುವಿನ ತಯಾರಿಕೆಯ ಜೊತೆಗೆ ಹೊಸ ರೂಪದ ವಸ್ತುವನ್ನು ತಯಾರಿಸಲು ಆರಂಭಿಸಬಹುದು. 

ಮಿಥುನ : ಮೇಲಧಿಕಾರಿಗಳ ಅನುಗ್ರಹವಿದ್ದು ವೃತ್ತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳು ಸಲೀಸಾಗಿ ಆಗುವುದು. ವ್ಯಾಪಾರಿಗಳಿಗೆ ತೃಪ್ತಿಕರವಾದ ವ್ಯಾಪಾರ ಆಗುವ ಸಂದರ್ಭವಿದೆ. ಮರದ ಕೆತ್ತನೆಯ ಕುಶಲ ಕರ್ಮಿಗಳಿಗೆ ಬೇಡಿಕೆ ಹೆಚ್ಚಾಗಿ ಆದಾಯವು ಹೆಚ್ಚುತ್ತದೆ. ಸ್ವಂತ ಉದ್ಯೋಗವನ್ನು ನಡೆಸುತ್ತಿರುವವರು ತಮ್ಮ ಕೆಲವೊಂದು ಜವಾಬ್ದಾರಿಗಳನ್ನು ಹಂಚುವುದು ಬಹಳ ಒಳ್ಳೆಯದು. ರಾಜಕೀಯ ವ್ಯಕ್ತಿಗಳಿಗೆ ಅವರ ವಿರೋಧಿಗಳಿಂದ ತೊಂದರೆ ಬರುವ ಸಾಧ್ಯತೆ ಇದೆ. 

ಕಟಕ : ಹಾಡುಗಾರರಿಗೆ ತಮ್ಮ ಸಾಧನೆಯಿಂದ ಯಶಸ್ಸನ್ನು ಪಡೆಯುವ ಯೋಗವಿದೆ. ಕೆಲವೊಂದು ಗುಂಪು ಚಟುವಟಿಕೆಗಳಿಗೆ ನಿಮಗೆ ಮುಂದಾಳತ್ವ ದೊರೆಯುತ್ತದೆ. ಕಾನೂನು ಪಂಡಿತರಿಗೆ ಹೆಚ್ಚಿನ ಬೇಡಿಕೆ ಇದ್ದು ಆದಾಯವು ಹೆಚ್ಚುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿನ ನಿಮ್ಮ ತಿಳಿವಳಿಕೆಯ ಸಲಹೆಗೆ ಹೆಚ್ಚು ಮನ್ನಣೆಯು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಮಕ್ಕಳ ಏಳಿಗೆ ತೃಪ್ತಿಕರವಾಗಿರುತ್ತದೆ. 

ಸಿಂಹ : ನಿಮ್ಮ ಭಾವನೆಗಳನ್ನು ಹಂಚಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ವ್ಯಕ್ತಿಗಳ ಸ್ನೇಹ ಮತ್ತು ಪರಿಚಯ ಒದಗಲಿದೆ. ಸಿದ್ಧಪಡಿಸಿದ ಆಹಾರವನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯಾಪಾರ ಒದಗಿ ಬರುತ್ತದೆ. ಮಾತುಗಳನ್ನು ಹೆಚ್ಚು ಎಚ್ಚರದಿಂದ ಆಡಿರಿ, ಇಲ್ಲವಾದಲ್ಲಿ ಮುಜುಗರಕ್ಕೆ ಒಳಗಾಗುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ನಿರುದ್ಯೋಗಿಗಳಿಗೆ ಒಂದು ಉದ್ಯೋಗ ದೊರೆಯುವ ಲಕ್ಷಣವಿದೆ. 

ಕನ್ಯಾ : ಪೋಷಕರಿಂದ ಮಕ್ಕಳ ಆಸೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಮನೆ ನಿರ್ಮಾಣ ಮಾಡುತ್ತಿದ್ದವರಿಗೆ ಇದ್ದ ಅಡೆತಡೆಗಳು ಸ್ವಲ್ಪಮಟ್ಟಿಗೆ ದೂರವಾಗುತ್ತವೆ. ಲೇಖನ ಮಾಲೆಯನ್ನು ಸಿದ್ಧಪಡಿಸುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಬಂಧುಗಳ ಗಲಾಟೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ನಿಮಗೆ ದುಬಾರಿಯಾಗಬಹುದು. ಯಂತ್ರೋಪಕರಣಗಳನ್ನು ದುರಸ್ತಿ ಮಾಡುವವರಿಗೆ ಹೆಚ್ಚಿನ ಕೆಲಸ ದೊರತು ಸಂಪಾದನೆಯಾಗುತ್ತದೆ. 

ತುಲಾ : ಸಾರ್ವಜನಿಕ ಜೀವನದಲ್ಲಿ ಇರುವವರು ಒರಟು ಮಾತು ಆಡುವುದನ್ನು ಬಿಡುವುದು ಒಳ್ಳೆಯದು. ಸ್ವಂತ ಉದ್ದಿಮೆ ನಡೆಸುವವರ ಹಣಕಾಸಿನ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ಕೃಷಿ ವ್ಯಾಪಾರಿಗಳು ದಳ್ಳಾಳಿಗಳಿಂದ ಮೋಸ ಹೋಗುವ ಸಾಧ್ಯತೆ ಇದೆ,

ಹೆಚ್ಚು ಎಚ್ಚರವಹಿಸಿರಿ. ಖರ್ಚು ಕಡಿಮೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವಿರಿ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಹಳೆಯ ವಾಹನಗಳನ್ನು ಕೊಂಡು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ.

ವೃಶ್ಚಿಕ : ವೃತ್ತಿಯಲ್ಲಿ ಸಮಸ್ಯೆಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ಸಂಶೋಧಕರಿಗೆ ಸಂಶೋಧನೆಯಲ್ಲಿ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆಗಳಿವೆ. ಕಾರ್ಮಿಕರು ಅವರ ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ಮಾಡಿದಲ್ಲಿ ಅವರ ಸಮಸ್ಯೆಗಳು ಪರಿಹಾರವಾಗುವುದು. ಉದ್ಯೋಗದ ನಿಮಿತ್ತ ದೂರದ ಸ್ಥಳಕ್ಕೆ ಹೋಗಿ ಬರುವ ಸಾಧ್ಯತೆ ಇದೆ. ಲಲಿತ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. 

ಧನು : ಕಚೇರಿ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿ ಬರುವ ಸಾಧ್ಯತೆಗಳಿವೆ. ಉದ್ದಿಮೆದಾರರು ತಮ್ಮ ಯೋಜನೆಗಳ ಬಗ್ಗೆ ಹಿರಿಯ ತಂತ್ರಜ್ಞರೊಡನೆ ಸಮಾಲೋಚನೆ ಮಾಡುವುದು ಉತ್ತಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಪತ್ರಿಕೋದ್ಯಮದವರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಆದಾಯವು ತೃಪ್ತಿಕರವಾಗಿರುತ್ತದೆ. ಬಂಧುಗಳೊಡನೆ ವಿಶ್ವಾಸವನ್ನು  ವೃದ್ಧಿಸಿಕೊಳ್ಳುವಿರಿ. ಅಪೇಕ್ಷಿತ ಆಸ್ತಿಯನ್ನು ಈಗ ಕೊಳ್ಳುವ ಯೋಗವಿದೆ. 

ಮಕರ : ಉದ್ದಿಮೆದಾರರಿಗೆ ಅವರ ಉದ್ದಿಮೆಯನ್ನು ಸುಧಾರಿಸಲು ಮತ್ತು ಸರಿದಾರಿಗೆ ತರಲು ಸಾಕಷ್ಟು ಅವಕಾಶಗಳು ಒದಗುತ್ತವೆ. ತಾಂತ್ರಿಕ ತಜ್ಞರಿಗೆ ಹೊಸ ಹೊಸ ಅವಕಾಶಗಳು ದೊರೆಯುತ್ತವೆ. ಮಾಧ್ಯಮದಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಕೆಲಸ ಮಾಡಬೇಕು. ದಂತ ವೈದ್ಯರಿಗೆ ಹೆಚ್ಚು ಅನುಕೂಲವಿರುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳ ಸಹಕಾರ ನಿಮಗೆ ಹೆಚ್ಚಾಗಿ ದೊರೆಯುತ್ತದೆ. ಆಸ್ತಿ ವಿಚಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ.

ಕುಂಭ : ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸವೂ ಹೆಚ್ಚಾಗುತ್ತದೆ. ಹಿರಿಯರು ತೆಗೆದುಕೊಳ್ಳುವ ಪರಿಣಾಮಕಾರಿ ನಿರ್ಧಾರಗಳು ಅವರ ಕುಟುಂಬವನ್ನು ಮೇಲೆತ್ತುತ್ತದೆ. ಚಾಲಕ ವರ್ಗದವರಿಗೆ ಹೆಚ್ಚಿನ ಸಂಪಾದನೆಯಾಗುವ ಯೋಗವಿದೆ. ವಾಹನ ತರಬೇತಿ ಶಾಲೆ ನಡೆಸುತ್ತಿರುವವರಿಗೆ ಆದಾಯ ಹೆಚ್ಚುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಧಾರ್ಮಿಕ ವಿಚಾರಗಳನ್ನು ಪ್ರಚಾರ ಮಾಡುವವರಿಗೆ ಹೆಚ್ಚಿನ ಮಾನ್ಯತೆಯು ದೊರೆಯುತ್ತದೆ.

ಮೀನ : ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಾಗಿ ಹೆಚ್ಚಿನ ತಯಾರಿ ಮಾಡಿಕೊಳ್ಳಬೇಕು. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭವಿದೆ. ಸಿಹಿತಿಂಡಿ ತಯಾರಿಸಿ ಮಾರುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಹಿರಿಯರ ಆರೋಗ್ಯ ವ್ಯತ್ಯಾಸದಿಂದಾಗಿ ಆಸ್ಪತ್ರೆಯ ಅಲೆದಾಟ ಹೆಚ್ಚಾಗುವ ಸಾಧ್ಯತೆಗಳಿವೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಉದ್ಯೋಗ ಸ್ಥಳದಲ್ಲಿ ಬಹಳ ಚುರುಕಾಗಿ ಕೆಲಸ ಮಾಡುವಿರಿ. ಹಿರಿಯರ ಆಸ್ತಿಯನ್ನು ಹೋರಾಟ ಮಾಡಿ ಪಡೆಯಬಹುದು. 

Leave a Comment