Coastal Bulletin

ಮೇಷ ಕೆಲವರೊಂದಿಗೆ ಅತಿಯಾಗಿ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ಸಂಬಂಧ ಹಳಸದಂತೆ ಎಚ್ಚರವಹಿಸಿರಿ. ವಾಹನ ಚಾಲನೆ ವೇಳೆ ಎಚ್ಚರ ಇರಲಿ. ಕೆಲವರು ಪಿತ್ರಾರ್ಜಿತ ಆಸ್ತಿಗಾಗಿ ನ್ಯಾಯಾಂಗದ ಮೊರೆ ಹೋಗಬೇಕಾಗಬಹುದು.

ವೃಷಭ

ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಪಾದಿಸುವವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಿರಿ. ರಾಜಕಾರಣಿಗಳು ಅವರ ಬಾಲ ಬುಡುಕರನ್ನು ದೂರವಿಡುವುದು ಬಹಳ ಉತ್ತಮ. ಕಳೆದುಹೋದ ದಿನಗಳ ಬಗ್ಗೆ ಬಹಳ ಚಿಂತಿಸುವುದು ಅಷ್ಟು ಸರಿಯಲ್ಲ.

ಮಿಥುನ

ಅನಿವಾರ್ಯವಲ್ಲದ ಕೆಲಸಗಳನ್ನು ಸ್ವಲ್ಪಮಟ್ಟಿಗೆ ಮುಂದೂಡುವುದು ಉತ್ತಮ. ವ್ಯಾಪಾರ ವ್ಯವಹಾರಗಳಲ್ಲಿನ ಆಗುಹೋಗುಗಳ ಬಗ್ಗೆ ಸರಿಯಾಗಿ ವಿಚಾರಣೆ ಮಾಡಿರಿ. ಅಧ್ಯಯನಕ್ಕೆ ಉತ್ತೇಜನ ಸಿಕ್ಕು ಉತ್ತಮ ವಿದ್ಯಾಲಯಗಳಲ್ಲಿ ಪ್ರವೇಶ ದೊರೆಯುತ್ತದೆ.

ಕಟಕ

ನಿಮ್ಮ ವಿರುದ್ಧ ನಿಮ್ಮ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುವ ಸಾಧ್ಯತೆ ಇದೆ. ಆ ಬಗ್ಗೆ ಉದಾಸೀನದಿಂದ ಇರುವುದು ಬಹಳ ಒಳ್ಳೆಯದು. ಮಿತ್ರರೊಡನೆ ಕೂಡಿ ಮಾಡುವ ಹಣಕಾಸಿನ ವ್ಯವಹಾರಗಳಲ್ಲಿ ಹೆಚ್ಚು ಜಾಗೃತರಾಗಿರುವುದು ಒಳ್ಳೆಯದು.

ಸಿಂಹ

ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಹೊಸ ಆಶಾಕಿರಣವೊಂದು ಗೋಚರಿಸುತ್ತದೆ. ಕೃಷಿಕರ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಸಂಗಾತಿಯ ಆದಾಯದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯನ್ನು ಕಾಣಬಹುದು. 

ಕನ್ಯಾ

ರಾಜಕೀಯ ನಾಯಕರುಗಳಿಗೆ ಅವರ ವಿಷಯದಲ್ಲಿ ಬದಲಾವಣೆಯೊಂದನ್ನು ಕಾಣಬಹುದು. ನೆರೆಹೊರೆಯವರಿಗೆ ನೀತಿ ಹೇಳಲು ಹೋಗಿ ಗೌರವಕ್ಕೆ ಧಕ್ಕೆ ತಂದುಕೊಳ್ಳುವಿರಿ. ಆದಾಯ ಕೊಡುವ ಹೊಸ ಮಾರ್ಗವೊಂದನ್ನು ಹುಡುಕಲು ಪ್ರಯತ್ನ ಪಡುವಿರಿ. ವ್ಯವಹಾರಗಳಲ್ಲಿ ಅತಿಯಾದ ಮಾತುಗಳ ಮೇಲೆ ಹಿಡಿತವಿರಲಿ.

ತುಲಾ

ವೃತ್ತಿ ನೈಪುಣ್ಯತೆಯಿಂದ ಕೆಲವು ನೌಕರರಿಗೆ ವಿಶೇಷ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಸಾಲ ಕೊಟ್ಟವರು ಮರುಪಾವತಿಗಾಗಿ ಎಡಬಿಡದೆ

ತಗಾದೆಯನ್ನು ಮಾಡುವರು. ಹೂಡಿಕೆ ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ಇರಲಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

ವೃಶ್ಚಿಕ

ಕೆಲಸಕಾರ್ಯಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಮನೆಯ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅಗತ್ಯ. ಪ್ರಯತ್ನಪಡುತ್ತಿದ್ದ ಸ್ಥಿರಾಸ್ತಿಯನ್ನು ಹೊಂದುವ ಅವಕಾಶವಿದೆ. ಸೂಕ್ಷ್ಮ ಕೆಲಸಕಾರ್ಯಗಳಲ್ಲಿ ನಿಮ್ಮ ಜಾಣ್ಮೆಯನ್ನು ಯಾರೊಡನೆಯೂ ಹಂಚಿಕೊಳ್ಳದಿರುವುದು ಬಹಳ ಉತ್ತಮ.

ಧನು

ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವವರಿಗೆ ವ್ಯವಹಾರ ಚೆನ್ನಾಗಿ ನಡೆದು ಆದಾಯ ಹೆಚ್ಚುತ್ತದೆ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆಗಳು ದೊರೆಯಬಹುದು. ಕೃಷಿಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸಗಳು ನಡೆಯುತ್ತವೆ. 

ಮಕರ

ಇರುವ ಸಂಸ್ಥೆಯನ್ನು ಬಿಟ್ಟು ಹೊಸ ಸಂಸ್ಥೆ ಅಥವಾ ಉದ್ಯೋಗಕ್ಕೆ ಸೇರುವ ಅವಕಾಶವಿದೆ. ನಿಮ್ಮ ಕಾರ್ಯಸೂಚಿಯಲ್ಲಿ ತುರ್ತು ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡಿರಿ. ಆರ್ಥಿಕವಾಗಿ ಸಾಕಷ್ಟು ಚೇತರಿಕೆಯನ್ನು ಕಂಡು ಹೊಸ ರೀತಿಯ ವ್ಯವಹಾರಗಳ ಆರಂಭದ ಬಗ್ಗೆ ಗಮನಹರಿಸುವಿರಿ.

ಕುಂಭ

ವೈಯಕ್ತಿಕ ವ್ಯವಹಾರದ ನಿಮಿತ್ತ ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಯುವಕರು ವೃತ್ತಿಯಲ್ಲಿ ಗುಂಪುಗಾರಿಕೆಯನ್ನು ಮಾಡಲು ಹೋಗಿ ಸಾಕಷ್ಟು ಹಿನ್ನಡೆ ಅನುಭವಿಸುವರು. ದೈನಂದಿನ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತದೆ.

ಮೀನ

ನಿಮ್ಮ ಗುಪ್ತ ಹಣ ಅಥವಾ ಗುಪ್ತ ಆಸ್ತಿಯ ವಿವರಗಳು ಹೊರಬರುತ್ತವೆ. ಬೇರೆಯವರ ಮಾತು ಕೇಳಿ ಕೆಲವು ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ, ಎಚ್ಚರವಹಿಸಿ. ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ. ತಾಯಿ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. 


Leave a Comment