Coastal Bulletin

ಮೇಷ : ಸಹೋದ್ಯೋಗಿಯ ಸಲಹೆ ಅತಿ ಸೂಕ್ತವಾಗಿದ್ದು ಅದರಂತೆ ನಡೆದು ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಲಾಭವನ್ನು ಕಾಣುವಿರಿ. ವಾದ ಮಾಡುವ ಅಭ್ಯಾಸ ದಿಂದ ಸಂಬಂಧಗಳು ಕೆಡಬಹುದು. ಯಾವುದೇ ಕಟ್ಟು ಪಾಡಿಗೆ ಬೀಳದೆ ಶ್ರದ್ಧೆಯಿಂದ ಕೆಲಸಮಾಡುವುದು ಒಳ್ಳೆಯದು. ಧಾರ್ಮಿಕ ಕೆಲಸಗಳನ್ನು ಹೆಚ್ಚು ಆಸಕ್ತಿ ಮೂಡಿ ಅದರಲ್ಲಿ ಸ್ವಲ್ಪ ಸಂಪಾದನೆ ಕೂಡ ಆಗುತ್ತದೆ. ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಹೆಚ್ಚಿನಮನ್ನಣೆ ದೊರೆಯುತ್ತದೆ.

ವೃಷಭ : ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ಜನರ ಸಂಪರ್ಕ ದೊರೆತು ಉದ್ಯೋಗಅಭಿವೃದ್ಧಿಯಾಗುತ್ತದೆ. ಚರ್ಮದ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ತಪ್ಪು ತಿಳುವಳಿಕೆಯಿಂದ ಅಥವಾ ಅತಿಯಾದಆಸೆಯಿಂದಹಣಕಳೆದುಕೊಳ್ಳುವ ಸಾಧ್ಯತೆ ಇದೆ,ಎಚ್ಚರ ವಹಿಸಿರಿ. ಕೌಟುಂಬಿಕವಾಗಿ ಇದ್ದ ಕ್ಲೇಶಗಳು ದೂರವಾಗುತ್ತವೆ. ವೈಯಕ್ತಿಕವಾಗಿ ಶುಭ ಸಮಾಚಾರ ಗಳನ್ನು ಕೇಳುವ ಯೋಗವಿದೆ.

ಮಿಥುನ : ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರ ಸರಿ ಎಂದು ಈಗ ತಿಳಿಯುತ್ತದೆ. ಖಾಸಗಿ ಉದ್ಯೋಗಿಗಳು ತಮ್ಮ ಆದಾಯ ಏರಿಕೆ ವಿಚಾರವನ್ನು ಮೇಲಧಿಕಾರಿ ಗಳಲ್ಲಿ ಪ್ರಸ್ತಾಪಿಸಬಹುದು. ಕೆಲವರಿಗೆ ಕಚೇರಿ ಕಡೆ ಯಿಂದ ವಿದೇಶ ಪ್ರಯಾಣ ಯೋಗ ದೊರೆಯುತ್ತದೆ. ಹೊಸ ವಾಹನ ವಹಿವಾಟು ಮಾಡುವವರಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಕೊಡುಕೊಳ್ಳುವವ್ಯವಹಾರ ಗಳಲ್ಲಿ ಲಾಭವಿರುತ್ತದೆ. ವಿವಾಹ ಯೋಗ್ಯರಿಗೆ ಶೀಘ್ರ ಸಂಬಂಧ ದೊರೆಯುವ ಸಾಧ್ಯತೆ ಇದೆ. 

ಕಟಕ : ಗಣಿತದಲ್ಲಿ ಪರಿಣತಿ ಹೊಂದಿರುವವರಿಗೆ ವಿದೇಶಿ ಕಂಪನಿಗಳಲ್ಲಿ ಉತ್ತಮ ಸ್ಥಾನ ಸಿಗುತ್ತದೆ. ಸಂದರ್ಶನಗಳಲ್ಲಿ ಧೈರ್ಯವಾಗಿ ಉತ್ತರಿಸಿದಾಗ ಯಶಸ್ಸು ನಿಮ್ಮೊಡನೆ ಇರುತ್ತದೆ. ಆರ್ಥಿಕ ಸ್ಥಿತಿಯು ಮಧ್ಯಮಗತಿಯಲ್ಲಿರುತ್ತದೆ. ದೊಡ್ಡಮಟ್ಟದ ವ್ಯವಹಾರ ನಡೆಸುವವರಿಂದ ಪಾಲುದಾರಿಕೆಗೆ ಕರೆ ಬರಬಹುದು, ಸದುಪಯೋಗ ಮಾಡಿಕೊಳ್ಳಿರಿ. ವಿದೇಶಿ ವ್ಯವಹಾರಗಳಲ್ಲಿ ಹೂಡಿದ ಬಂಡವಾಳಗಳು ಹೆಚ್ಚಳವನ್ನು ಕಾಣುತ್ತವೆ. 

ಸಿಂಹ : ಹಳೆಯ ವಾಹನವನ್ನು ಮಾರಾಟ ಮಾಡುವವರಿಗೆ ಸ್ವಲ್ಪ ಅಭಿವೃದ್ಧಿ ಇದೆ. ಮೂಳೆ ನೋವುಗಳಿಗಾಗಿ ಚಿಕಿತ್ಸೆ ಪಡೆಯುವಿರಿ. ನಿಮ್ಮ ಆಲೋಚನೆಗಳನ್ನು ಇತರರೊಡನೆ ಮುಕ್ತವಾಗಿ ಹಂಚಿಕೊಳ್ಳಬೇಡಿರಿ, ಇದು ವಾಗ್ವಾದಕ್ಕೆ ಕಾರಣವಾಗಬಹುದು. ದನಾದಾಯವು ಸಾಮಾನ್ಯ ಗತಿ ಯಲ್ಲಿರುತ್ತದೆ. ಕೃಷಿಕರಿಗೆ ಹೆಚ್ಚಿನ ಲಾಭ ವಿರುತ್ತದೆ ಸ್ವಂತ ಉದ್ದಿಮೆಗಾರರಿಗೆ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಯೋಗವಿದೆ. 

ಕನ್ಯಾ : ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ದಂಡ ಕಟ್ಟುವ ಪರಿಸ್ಥಿತಿ ಎದುರಾಗಬಹುದು ಹಾಗಾಗಿ ಜಾಗ್ರತೆಯಿಂದ ಕೆಲಸ ಮಾಡಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.ಹಿತ್ತಾಳೆ ತಾಮ್ರಮುಂತಾದ ಲೋಹಗಳ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ವಿಸ್ತರಿಸಿ ಲಾಭ ಹೆಚ್ಚುತ್ತದೆ. ಶುಭ ಕಾರ್ಯಗಳನ್ನು ಆಯೋಜಿಸುವವರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ.

ತುಲಾ : ಔಷಧಿ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರವಾಗುವ ಸಾಧ್ಯತೆ ಇದೆ. ಸರಕು ಸಾಗಣೆ ಮಾಡುವವರ ಆದಾಯ ಹೆಚ್ಚಾಗಲಿದೆ. ಕಾರ್ಯ ಒತ್ತಡದಿಂದ ವೃತ್ತಿಯಲ್ಲಿ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ.ಕಬ್ಬಿಣ ಮತ್ತು

ಸಿಮೆಂಟ್ ವ್ಯಾಪಾರಿಗ ಳಿಗೆ ಹೆಚ್ಚಿನ ವ್ಯವಹಾರವಾಗುತ್ತದೆ. ನೀರಿನ ವ್ಯತ್ಯಾಸ ದಿಂದ ಆರೋಗ್ಯ ವ್ಯತ್ಯಾಸವಾಗಬಹುದು. ಆರಂಭ ದಲ್ಲಿ ಅತಿ ಉತ್ಸಾಹದಿಂದ ಶುರು ಮಾಡಿದ ಕೆಲಸಗಳು ನಿಲ್ಲುವ ಸಂದರ್ಭಗಳಿವೆ. 

ವೃಶ್ಚಿಕ : ನ್ಯಾಯಾಲಯದಲ್ಲಿ ಇದ್ದ ಸಮಸ್ಯೆಗಳಿಗೆ ಈಗ ಉತ್ತರ ಸಿಗುತ್ತದೆ. ಕುಶಲಕರ್ಮಿಗಳಿಗೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟದಿಂದ ಆದಾಯ ಸ್ವಲ್ಪ ಹೆಚ್ಚುತ್ತದೆ. ಈ ದಿನ ಈಗ ಬರುವ ಆಲೋಚನೆಗಳು ನಿಮ್ಮ ಖರ್ಚಿಗೆ ದಾರಿ ಮಾಡಿಕೊಡುತ್ತವೆ. ಶೇರುಪೇಟೆ ವ್ಯವಹಾರದಿಂದ ಅಂತಹ ಅಭಿವೃದ್ಧಿ ಇಲ್ಲ. ಆಹಾರ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ವ್ಯವಹಾರವಾಗುತ್ತದೆ.

ಧನು : ನಿಮ್ಮ ಸರಳ ವ್ಯಕ್ತಿತ್ವ ಗೌರವವನ್ನು ಹೆಚ್ಚಿಸುತ್ತದೆ. ಮಾತಿನ ಚತುರತೆಯಿಂದ ಇತರರನ್ನು ಗೆಲ್ಲುವಿರಿ. ಪೋಲಿಸ್ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಿಗೆ ಇರುತ್ತದೆ. ಹೂವು ಮತ್ತು ಹಣ್ಣು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ಯಂತ್ರೋಪ ಕರಣಗಳನ್ನು ರಿಪೇರಿ ಮಾಡುವವರಿಗೆ ಹೆಚ್ಚು ಕೆಲಸ ಗಳು ದೊರೆಯುತ್ತವೆ. ಪಶು ಸಂಗೋಪನೆ ಮಾಡುವ ವರಿಗೆ ಆದಾಯ ಹೆಚ್ಚುತ್ತದೆ.

ಮಕರ : ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಗುಣ ನಿಮಗೆ ಸಿದ್ಧಿಸುತ್ತದೆ. ನಿಮ್ಮ ಅನಿವಾರ್ಯಗಳಿಗೆ ಸಂಬಂಧಿಕರಿಂದ ಧನಸಹಾಯ ನಿರೀಕ್ಷೆಮಾಡಬೇಡಿರಿ. ನಿವೇಶನ ಖರೀದಿಯ ಬಗ್ಗೆ ಮುಂದುವರೆಯುವುದು ಒಳ್ಳೆಯದು. ವೃತ್ತಿಯಲ್ಲಿ ಯಾವುದೇ ವಾದ ವಿವಾದ ಗಳಾದರೂ ಏನು ತೊಂದರೆ ಇಲ್ಲ. ಸಾಹಿತಿಗಳಿಗೆ ಉತ್ತಮವಾದ ಗೌರವ ದೊರೆಯುವ ಸಂದರ್ಭವಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಗತಿಯನ್ನು ಕಾಣುವ ಯೋಗವಿದೆ. ಹಣದ ಒಳಹರಿವು ಸಾಮಾನ್ಯ ಗತಿ ಯಲ್ಲಿರುತ್ತದೆ.

ಕುಂಭ : ಅಗತ್ಯವಾದ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವುದು ಉತ್ತಮ. ಉದ್ಯೋಗದಲ್ಲಿನ ಬದಲಾ ವಣೆಗಳು ನಿಧಾನವಾಗಬಹುದು. ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ವಕೀಲರಿಗೆ ಹೆಚ್ಚು ದಾವೆಗಳು ದೊರೆತು ಆದಾಯ ಹೆಚ್ಚುತ್ತದೆ.ರಾಜಕೀಯ ಕ್ಷೇತ್ರದಲ್ಲಿರುವವರು ಅವರ ಸ್ಥಾನಮಾನಗಳಿಗಾಗಿ ವಶೀಲಿ ಮಾಡಬೇಕಾಗ ಬಹುದು. 

ಮೀನ : ದಾಂಪತ್ಯ ಜೀವನದಲ್ಲಿ ತಾಳ್ಮೆಯಿಂದ ಮುನ್ನಡೆಯುವುದು ಮುಖ್ಯ. ಎಣ್ಣೆ ಕಾಳುಗಳ ಬೆಳೆಗಾರರಿಗೆ ಉತ್ತಮ ಫಸಲು ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಪೂರಕ ವಾತಾವರಣಗಳು ದೊರೆಯುತ್ತವೆ. ಅತಿಯಾದ ಖರ್ಚು ಆರ್ಥಿಕ ಏರಿಳಿತಕ್ಕೆ ಕಾರಣವಾಗಬಹುದು. ಸಮೂಹದಲ್ಲಿ ಮಾತನಾಡುವಾಗ ಸಾಕಷ್ಟು ಎಚ್ಚರ ವಿರಲಿ.ಯಾರ ಬಗ್ಗೆಯೂ ವೈಯಕ್ತಿಕ ಟೀಕೆಗಳು ಬೇಡ. 

Leave a Comment