ಜೋತಿಷ್ಯ ಅನಿಲ್ ಪಂಡಿತ್ ಗೆ ಸಾಮಾಜಿಕ ಜಾಲತಾಣ ಮೂಲಕ ಅವಹೇಳನಗೈದವರಿಗೆ ಕಾನೂನು ಕ್ರಮಕ್ಕೆ ಒತ್ತಾಯ :ಪ್ರಭಾಕರ ಪ್ರಭು

Coastal Bulletin
ಜೋತಿಷ್ಯ ಅನಿಲ್ ಪಂಡಿತ್ ಗೆ ಸಾಮಾಜಿಕ ಜಾಲತಾಣ ಮೂಲಕ ಅವಹೇಳನಗೈದವರಿಗೆ ಕಾನೂನು ಕ್ರಮಕ್ಕೆ ಒತ್ತಾಯ :ಪ್ರಭಾಕರ ಪ್ರಭು

ಬಂಟ್ವಾಳ ತಾಲೂಕು ಬ್ರಹ್ಮರಕೂಟ್ಲುನಲ್ಲಿರುವ ಜೋತಿಷ್ಯ ಅನಿಲ್ ಪಂಡಿತ್ ರವರು ಬಿಸಿರೋಡ್ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಜರಗಲಿರುವ ಗುರು ಪೂರ್ಣಿಮಾ ಕಾರ್ಯಕ್ರಮದ ಪ್ರಚಾರ ಬ್ಯಾನರ್ ಅಳವಡಿಸಿದ್ದಾರೆ ಎಂಬ ಕ್ಷುಲ್ಲಕ ಕಾರಣದಿಂದ ಅವರ ಸೇವಾ ಮನೋಭಾವನೆಯನ್ನು ಸಹಿಸದ ಕೆಲವೊಂದು ಚೇಷ್ಟೆಗಳು     ಜೋತಿಷ್ಯರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಅವಹೇಳನ ಪದಗಳ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಿ ತೇಜೋವಧೆಗೆ ಪ್ರಯತ್ನ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.

ಜೋತಿಷ್ಯರು ತನ್ನಲ್ಲಿ ಕಷ್ಟಗಳನ್ನು ಹೇಳಿಕೊಂಡು ಬರುತ್ತಿರುವವರನ್ನು ಯಾವುದೇ ಧರ್ಮ, ಜಾತಿ, ಪಂಗಡ ನೋಡದೇ ಬೇಧಭಾವವಿಲ್ಲದೆ ಎಲ್ಲರಿಗೂ ತಮ್ಮ ವೈಯಕ್ತಿಕ ಸಮಸ್ಯೆ ಸಹಿತ ಇನ್ನಿತರ ಕಷ್ಟಗಳಿಗೆ ಪರಿಹಾರ ಸೂತ್ರಗಳನ್ನು ನೀಡುತ್ತಿದ್ದರು ಎಂದೂ ಸಾರ್ವಜನಿಕ ವಲಯದಿಂದ ತಿಳಿದುಬಂದಿದೆ. ಇದನ್ನೂ ಸಹಿಸದ ಪೋಕ್ರಿ ಪುಂಡರು

ಸಮಾಜದಲ್ಲಿ ನೆಮ್ಮದಿಯನ್ನು ಕೆಡಿಸುವ ದುರುದ್ದೇಶದಲ್ಲಿ ಜೋತಿಷ್ಯರ ಭಾವಚಿತ್ರ ಹಾಕಿಕೊಂಡು ಇಲ್ಲಸಲ್ಲದ ಬರಹಗಳನ್ನು ಬರೆದು  ಸೋಷಿಯಲ್ ಮೀಡಿಯದಲ್ಲಿ ಹರಡಿಸಿ ಜೋತಿಷ್ಯ ಅನಿಲ್ ಪಂಡಿತ್ ರವರ ಹೆಸರು ಕೆಡಿಸಲು ಪ್ರಯತ್ನಿಸಿದವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಲು ಪತ್ರಿಕಾ ಹೇಳಿಕೆ ಮೂಲಕ  ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

Leave a Comment