ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬಳಿ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯರ ಅಭಿಮಾನಿಗಳು ಕಳೆದ 30 ವರ್ಷಗಳ ಹಿಂದೆ ಆರಂಭಿಸಿದ 'ಪೊಳಲಿ ಯಕ್ಷೊತ್ಸವ' ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಕಳೆದ 90 ವರ್ಷಗಳಲ್ಲಿ ಯಕ್ಷಗಾನ ಮೇಳಗಳ ಯಜಮಾನಿಕೆ ನಡೆಸಿದ ಹಿನ್ನೆಲೆ ಹೊಂದಿರುವ ಕಲ್ಲಾಡಿ ಮನೆತನದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ಅನುಪಮಾ ಡಿ.ಶೆಟ್ಟಿ ದಂಪತಿಗೆ ಪ್ರಸಕ್ತ ಸಾಲಿನ 'ಯಕ್ಷೊತ್ಸವ ಪ್ರಶಸ್ತಿ' ಅರ್ಹವಾಗಿಯೇ ಸಂದಿದೆ ಎಂದು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಹೇಳಿದ್ದಾರೆ.
ಇಲ್ಲಿನ ಪೊಳಲಿ ರಾಜಾಂಗಣದಲ್ಲಿ ಭಾನುವಾರ ಸಂಜೆ ನಡೆದ 31ನೇ ವರ್ಷದ 'ಯಕ್ಷೊತ್ಸವ' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಹಿರಿಯ ಹಿಮ್ಮೇಳ ಕಲಾವಿದ ಹರಿನಾರಾಯಣ ಬೈಪಡಿತ್ತಾಯ ಇವರಿಗೆ ದಿನೇಶ್ ಅಮ್ಮಣ್ಣಾಯ ಸ್ಮೃತಿ ಗೌರವ ಪ್ರಶಸ್ತಿ ಪ್ರದಾನ ಬಗ್ಗೆ ಕಲಾವಿದ ಉಜಿರೆ ಅಶೋಕ್ ಭಟ್ ಅಭಿನಂದನೆ ಸಲ್ಲಿಸಿದರು. ಅಗಲಿದ ಕಲಾವಿದರಿಗೆ ರವಿ ಅಲೆವೂರಾಯ ಸಂಸ್ಮರಣೆ ಸಲ್ಲಿಸಿದರು. 15 ಮಂದಿ ಹಿರಿಯ ಕಲಾವಿದರನ್ನು ಗೌರವ ನಿಧಿಯೊಂದಿಗೆ ಸನ್ಮಾನಿಸಲಾಯಿತು. ಕಲಾ ಪ್ರೋತ್ಸಾಹಕರಾದ ಮೂಡುಬಿದ್ರೆ ಯಕ್ಷ ಸಂಗಮದ ಶಾಂತಾರಾಮ ಕುಡ್ವ, ಪುಳಿಂಚ ಸೇವಾ ಪ್ರತಿಷ್ಠಾನದ ಶ್ರೀಧರ ಶೆಟ್ಟಿ ಪುಳಿಂಚ, ಸಂಘಟಕ ಜಿ.ರಾಘವೇಂದ್ರ ಪುತ್ತೂರಾಯ ಇವರಿಗೆ 'ಯಕ್ಷ ಕಲಾ' ಗೌರವ ಸಮರ್ಪಣೆ ಬಗ್ಗೆ ಕದ್ರಿ ನವನೀತ ಶೆಟ್ಟಿ ಅಭಿನಂದನೆ ಸಲ್ಲಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಂದ್ರ ಪರವ ಕರಿಯಂಗಳ ಇವರನ್ನು ಗೌರವಿಸಲಾಯಿತು.
ಪೊಳಲಿ
ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ ಶೆಟ್ಟಿ ಅಮ್ಮುಂಜೆಗುತ್ತು, ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ, ಪ್ರಧಾನ ಅರ್ಚಕ ಅನುವಂಶಿಕ ಮೊಕ್ತೇಸರ ಮಾಧವ ಭಟ್ ಪೊಳಲಿ, ಅರ್ಚಕ ಅನಂತ ಪದ್ಮನಾಭ ಭಟ್, ಕಾರ್ಯನಿರ್ವಹಣಾಧಿಕಾರಿ ಕೆ. ಪಿ. ಚಂದ್ರಮೋಹನ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕನರ್ಿರೆ ಸುವರ್ಣ ಪ್ರತಿಷ್ಠಾನ ಅಧ್ಯಕ್ಷ ಪ್ರಭಾಕರ ಡಿ.ಸುವರ್ಣ ಕನರ್ಿರೆ ಶುಭ ಹಾರೈಸಿದರು.
ಸಮಿತಿ ಸಂಸ್ಥಾಪಕ ಅನಭ ಪೊಳಲಿ, ಪ್ರಮುಖರಾದ ಲೋಕೇಶ್ ಭರಣಿ, ಸುಬ್ರಾಯ ಕಾರಂತ, ಮೋಹನ್ ಬಿಲ್ವಪತ್ರೆ ಮತ್ತಿತರರು ಇದ್ದರು.
ಸಮಿತಿ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಯೋಜಕ ಜನಾರ್ದನ ಅಮ್ಮುಂಜೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ವಿಶೇಷತೆ:
ಜಿಲ್ಲೆಯ ಆಯ್ದ ಕಲಾವಿದರಿಂದ ಭಾನುವಾರ ಬೆಳಿಗ್ಗೆಯಿಂದ ರಾತ್ರಿತನಕ 'ರಾಜಾ ಯಯಾತಿ', 'ಇಂದ್ರಕೀಲಕ ಮತ್ತು 'ರಾಮಾಂಜನೇಯ' ಹೀಗೆ ಮೂರು ಪ್ರಸಂಗಗಳು ಒಟ್ಟು 18 ಗಂಟೆಗಳಲ್ಲಿ ನಿರಂತರ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.











