ಪಚ್ಚಿನಡ್ಕ:ಓಂ ಫ್ರೆಂಡ್ಸ್ ಕ್ಲಬ್ ಅಶ್ರಯದಲ್ಲಿ "ಕೆಸರ್ದ ಕಂಡೊಡು ಕುಸಲ್ದ ಪಂಥ"

Coastal Bulletin
ಪಚ್ಚಿನಡ್ಕ:ಓಂ ಫ್ರೆಂಡ್ಸ್ ಕ್ಲಬ್ ಅಶ್ರಯದಲ್ಲಿ "ಕೆಸರ್ದ ಕಂಡೊಡು ಕುಸಲ್ದ ಪಂಥ"

ಪಚ್ಚಿನಡ್ಕ: ಓಂ ಫ್ರೆಂಡ್ಸ್ ಕ್ಲಬ್ (ರಿ.) ಪಚ್ಚಿನಡ್ಕದ 3ನೇ ವರ್ಷದ “ಕೆಸರ್ದ ಕಂಡೊಡು ಕುಸಲ್ದ ಪಂಥ” ಕಾರ್ಯಕ್ರಮವು ಆದಿತ್ಯವಾರ 4ರಂದು ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಸ್ಥಳದಾನಿ ಉಮೇಶ್ ಶೆಟ್ಟಿ ಬಟ್ಟತೋಡಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ರಾಜೇಶ್ ನಾಯಕ್, ಎ.ಜೆ. ಶೇಖರ್ (ಉದ್ಯಮಿ), ಧರ್ಮೇಂದ್ರ ಗಣೇಶಪುರ (ಉದ್ಯಮಿ), ಉಪಾಧ್ಯಕ್ಷರಾದ  ಸದಾಶಿವ ಆಚಾರ್ಯ, ಲಕ್ಷ್ಮಣ್ ಶೆಟ್ಟಿ, ಶಶಿಪ್ರಭಾ, ಬಾಲಗೋಕುಲ ಅಧ್ಯಕ್ಷರಾದ  ಅಮಿತಾ ಮತ್ತು ವಿಶ್ವನಾಥ ದಾಸರಕೋಡಿ ಹಾಗೂ ಕೋಶಾಧಿಕಾರಿ  ರಾಜೇಶ್ ಆಚಾರ್ಯ, , ಆನಂದ, ಸಂಚಾಲಕರಾದ ಸಂತೋಷ್ , ಕಾರ್ಯದರ್ಶಿ  ಚರಣ್ , ಶೇಖರ್ ಶೆಟ್ಟಿ,

ಸತೀಶ್ ಶೆಟ್ಟಿ, ಚಂದ್ರಾವತಿ, ಮತ್ತು ವ್ಯಾಘ್ರ ಚಾಮುಂಡೇಶ್ವರಿ ಸ್ನೇಹ ಬಳಗದ ಅಧ್ಯಕ್ಷರಾದ ಪದ್ಮಾನಾಭ ಹಾಗೂ ತ್ರಿಶೂಲ್ ಫ್ರೆಂಡ್ಸ್ ಅಧ್ಯಕ್ಷರಾದ ಪ್ರಸಾದ್ ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಪಡು  ಕಾರ್ಯಕ್ರಮ ನಿರೂಪಿಸಿದರು, ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಹಾಗೂ ಮನರಂಜನಾ ಸ್ಪರ್ಧೆಗಳು ನಡೆದವು. ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Leave a Comment