ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರು ದತ್ತನಗರದ ಶ್ರೀ ವೀರ ಹನುಮಾನ್ ಮಂದಿರದ 25ನೇ ವರ್ಷದ ಅಂಗವಾಗಿ ಜ. 11ರಿಂದ 17ರವರೆಗೆ ನಡೆಯಲಿರುವ 'ರಜತ ಮಹೋತ್ಸವ ಸಂಭ್ರಮ'ದ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ. 22ರಂದು ಮಂದಿರದಲ್ಲಿ ನಡೆಯಿತು.
ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು, ಗೌರವ ಸಲಹೆಗಾರರಾದ ಸದಾಶಿವ ಡಿ. ತುಂಬೆ ಹಾಗೂ ಸುಬ್ರಮಣ್ಯ ರಾವ್ ನೆತ್ತರಕೆರೆ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಮಂದಿರದ 25 ವರ್ಷಗಳ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಸ್ಮರಿಸಿದರು. ರಜತ ಮಹೋತ್ಸವವು ಭಕ್ತಾದಿಗಳ ಸಹಕಾರ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಅರ್ಥಪೂರ್ಣವಾಗಿ ನಡೆಯಲಿ ಎಂದು ಹಾರೈಸಿದರು.
ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ
ಗಂಭೀರ ಸುಜೀರುಗುತ್ತು, ಗೌರವ ಸಲಹೆಗಾರ ಅಶೋಕ್ ಶೆಟ್ಟಿ ಸುಜೀರುಗುತ್ತು, ಅಶಿತ್ ಶೆಟ್ಟಿ ಸುಜೀರುಗುತ್ತು, ಹಿರಿಯರಾದ ರಾಮಚಂದ್ರ ಬಂಗೇರ ಮಾರಿಪಲ್ಲ,ಪ್ರತಾಪ್ ಆಳ್ವ ಸುಜೀರುಗುತ್ತು, ದಾಮೋದರ ಸಪಲ್ಯ,ಮಾಲತಿ ಶೆಟ್ಟಿ ಹೊಸಮನೆ,ಮೀನಾಕ್ಷಿ ದತ್ತನಗರ, ಅಮಿತಾ ಫರಂಗಿಪೇಟೆ,ಸಂಜೀವ ಬೆಂಜನಪದವು, ಜಗದೀಶ ಕುಮ್ಡೇಲ್,ವಿಜಯ ಕುಲಾಲ್, ಕಿಶೋರ್ ಸುಜೀರು,ರಾಮಕೃಷ್ಣ ಪೂಜಾರಿ ದತ್ತನಗರ,ಬಾಬು ಕೊಡಂಗೆ. ಸಂತೋಷ್ ಕೊಡಂಗೆ,ರವೀಂದ್ರ ದತ್ತನಗರ, ಸಂದೀಪ್ ದತ್ತನಗರ,ರಕ್ಷಿತ್ ದೆಯಡ್ಕ, ರಂಜಿತ್ ಶೆಟ್ಟಿ ಮಲ್ಲಿ,ದೀಪಕ್ ದೆಯಡ್ಕ,ಯಸ್ ಜಯ ಬೆಳ್ಚಾಡ ದತ್ತನಗರ,ಪುರುಷೋತ್ತಮ ದತ್ತನಗರ ಮತ್ತಿತರರು ಉಪಸ್ಥಿತರಿದ್ದರು.
ಆಡಳಿತ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ ಸುಜೀರುಬೀಡು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.









