ಬಂಟ್ವಾಳ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಧಿಕೃತ ಕಂಬಳ ಕ್ರೀಡೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಿತ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯಿಂದ ರೂ 1 ಕೋಟಿ ಮೊತ್ತದ ಅನುದಾನ ಮಂಜೂರಾಗಿದೆ. ಅ ಮೂಲಕ ಪ್ರತೀ ಕಂಬಳಕ್ಕೆ ತಲಾ ರೂ 10 ಲಕ್ಷ ಮೊತ್ತದ ಅನುದಾನ ನೀಡಲು ಸಹಕರಿಸಿದ ಮುಖ್ಯಮಂತ್ರಿ ಡಿ. ಕೆ . ಶಿವಕುಮಾರ್ ಅವರ ಕೊಡುಗೆ ಅವಿಸ್ಮರಣೀಯ ಎಂದು ರಾಜ್ಯ ರಾಜ್ಯ ಕಂಬಳ ಅಸೋಸಿಯಶನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ವತಿಯಿಂದ ಶನಿವಾರ ರಾತ್ರಿ ನಡೆದ 4ನೇ ವರ್ಷದ 'ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಅದಾನಿ ಸಂಸ್ಥೆ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ' ಜಿಲ್ಲೆಯ ಸಾಂಸ್ಕೃತಿಕ ಮೆರುಗು ಹೆಚ್ಚಿಸುವ ಕಂಬಳ, ನಾಗರಾಧನೆ, ದೈವರಾಧನೆ ಮತ್ತಿತರ ಸಂಸ್ಕೃತಿ ಉಳಿಸುವಲ್ಲಿ ರಾಜಕೀಯ ರಹಿತ ಸಂಘಟಿತ ಹೋರಾಟ ಅಗತ್ಯವಿದೆ' ಎಂದರು.
ಕಂಬಳ ಸಮಿತಿ ಗೌರವಾಧ್ಯಕ್ಷರಾದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮತ್ತು ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕ ಹರೀಶ್ ಪೂಂಜ ಶುಭ ಹಾರೈಸಿದರು.
ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಪ್ರಾಸ್ತಾವಿಕ ಮಾತನಾಡಿದರು.
ಇದೇ ವೇಳೆ ಹಿರಿಯ ವೈದ್ಯ ಡಾ. ಪ್ರಭಾಚಂದ್ರ ಜೈನ್, ಮಹಮ್ಮದ್ ಕೆರೆಬಳಿ, ಮರಿಯಾ ರೀಟಾ ಫೆರ್ನಾಂಡಿಸ್ ಮತ್ತಿತರ ಸಾಧಕರು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.
ಉದ್ಯಮಿ ಶ್ರೀಪತಿ ಭಟ್ ಮೂಡುಬಿದ್ರೆ, ಚಿತ್ರನಿರ್ಮಾಪಕ ಅರುಣ್
ರೈ ತೋಡಾರು ನಟ ದೇವದಾಸ್ ಕಾಪಿಕಾಡ್, ಪ್ರಮುಖರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಪ್ರಶಾಂತ್ ಕಾಜವ ನರಿಂಗಾನ,
ಡಾ.ಸುದೀಪ್ ಕುಮಾರ್ ಜೈನ್,
ಲೀಲಾಕ್ಷ ಕರ್ಕೇರ, ಚಂದ್ರಹಾಸ ಶೆಟ್ಟಿ ಬಾಲಾಜಿಬೈಲು, ಓಂ ಪ್ರಸಾದ್ ಬಾರ್ದಿಲ, ಎಂ. ಪದ್ಮರಾಜ ಬಲ್ಲಾಳ್ ಮಾವಂತೂರು, ಎಂ. ಅವಿಲ್ ಮಿನೆಜಸ್ ಲೊರೆಟ್ಟೋ,
ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ವಸಂತ ಕುಮಾರ್ ಅಣ್ಣಳಿಕೆ, ಉಮೇಶ್ ಕೋಟ್ಯಾನ್, ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ವಿಜಯ ಕುಮಾರ್ ಕಂಗಿನಮನೆ
ಮತ್ತಿತರರು ಭಾಗವಹಿಸಿದ್ದರು.
ಕಂಬಳ ಸಮಿತಿ ಗೌರವ ಸಲಹೆಗಾರ ಕಿರಣ್ ಕುಮಾರ್ ಮಂಜಿಲ, ವಸಂತ ಶೆಟ್ಟಿ ಕೇದಗೆ, ಸುರೇಶ ಶೆಟ್ಟಿ ಸಿದ್ದಕಟ್ಟೆ, ಚಂದ್ರಶೇಖರ ಕೊಡಂಗೆ, ಬಾಬು ರಾಜೇಂದ್ರ ಶೆಟ್ಟಿ, ಜನಾರ್ದನ ತಿಮರಡ್ಕ, ದುರ್ಗಾದಾಸ್ ಶೆಟ್ಟಿ ಕರೆಂಕಿಜೆ,
ಉಮೇಶ್ ಹಿಂಗಾಣಿ, ಶಿವಾನಂದ ರೈ,
ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಕಲ್ಲಾಪು, ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ,
ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಮಧುಸೂದನ್ ಸಾಲ್ಯಾನ್ , ನವೀನ್ ಹೆಗ್ಡೆ, ಉಮೇಶ್ ಶೆಟ್ಟಿ ಕೊನೆರೊಟ್ಟು, ಸಂದೇಶ್ ಶೆಟ್ಟಿ ಪೊಡುಂಬ, ಸುರೇಶ ಶೆಟ್ಟಿ ಕುತ್ಲೋಡಿ, ಅವನ್ ಕುಮಾರ್ ಜೈನ್, ದೇವರಾಜ್ ಸಾಲ್ಯಾನ್
ಮತ್ತಿತರರು ಇದ್ದರು.









