ಕವನ
ಧ್ಯಾನ
ಸರಳ ವಿಧಾನ
ಹಾಕು ಸುಖಾಸನ
ಗಮನಿಸು ಉಸಿರಿನ ಆರೋಹಣ ಅವರೋಹಣ
ಅನುಭವಿಸು ಆನಂದಿಸು ನಿರಾಳ ತನು ಮನ.
ಬದುಕು
ಏನಾದರಾಗಲೀ ಹರಿ ಕೃಪೇ ಇರಲೀ
ನಿರಾಶ ಭಾವ ಹತ್ತಿರ ಸುಳಿಯದಿರಲಿ.
ಲಸಿಕೆ
ಅಂದು ನಾ ಒಲ್ಲೆ ನಾ
ಒಲ್ಲೆ
ಇಂದು ನಾ ಮುಂದು
ನೀ ಮುಂದು...
ಸಖ
ಸುಖವಾಗಲಿ ದುಖ:ವಾಗಲಿ
ಸಖ..
ನೀನಾಗಿರು ಪಾಂಡುರಂಗ.
ಅಪ್ಪನ ಸೈಕಲ್ ನಲ್ಲಿ ಮಕ್ಕಳ ಹೆಸರಿತ್ತು
ಆದರೆ ಮಕ್ಕಳ ಕಾರಿನಲ್ಲಿ ತಂದೆಯ ಹೆಸರೇ ಇರಲಿಲ್ಲ
ಬರಹ : ಸುರೇಖಾ ನಾಯಕ್ ಬೆಂಗಳೂರು.