breaking news

ಸಿದ್ದಕಟ್ಟೆ: ಕುಲಾಲ ಸುಧಾರಕ ಸಂಘದಿಂದ  ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ.

Coastal Bulletin
ಸಿದ್ದಕಟ್ಟೆ: ಕುಲಾಲ ಸುಧಾರಕ ಸಂಘದಿಂದ  ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ.

ಬಂಟ್ವಾಳ : ಕುಲಾಲ ಸುಧಾರಕ ಸಂಘ ಸಿದ್ದಕಟ್ಟೆಯ ಮುಂದಾಳತ್ವದಲ್ಲಿ ಕುಕ್ಕಿಪಾಡಿ ಗ್ರಾಮದ ಪೇಳತ್ತಬೆಟ್ಟು  ಕುದ್ಕೊಳಿ ಜಯಂತಿ ಅವರ ಕುಟುಂಬಕ್ಕೆ ನಿರ್ಮಿಸಿಕೊಡಲಾದ ನೂತನ ಸಮೃದ್ಧಿ ನಿಲಯ ಮನೆಯನ್ನು ನವೆಂಬರ್ 22ರಂದು ಹಸ್ತಾಂತರಿಸಲಾಯಿತು.

ಈ ಸಂಧರ್ಭ ನಡೆದ ಸಭಾಕಾರ್ಯಕ್ರಮದಲ್ಲಿ  ಶ್ರೀ ಕ್ಷೇತ್ರ ಪೂಂಜಾದ ಕೃಷ್ಣ ಪ್ರಸಾದ್ ಆಚಾರ್ಯ ಅಸ್ರಣ್ಣರು ಆಶೀರ್ವಚನ ನೀಡಿ

ಕುಲಾಲ ಸುಧಾರಕ ಸಂಘ ಸಿದ್ದಕಟ್ಟೆಯ ಸೇವಾ ಕಾರ್ಯ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳಿಗೆ ದೇವರು ಇನ್ನಷ್ಟು ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡಲಿ. ನೂತನ ಮನೆಯಲ್ಲಿ ವಾಸಿಸುವ ಕುಟುಂಬಕ್ಕೆ ಸಕಲ ಸಂಪತ್ತು, ಸುಖ-ಸಮೃದ್ಧಿ ಕರುಣಿಸಲಿ ಎಂದು ಹಾರೈಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮಾತನಾಡಿ, ಸಂಘಟನೆಗಳು ಸ್ಥಾಪನೆಯಾಗುವ ಉದ್ದೇಶ ಮತ್ತು ಅವುಗಳ ಮಹತ್ವವನ್ನು ಸಿದ್ದಕಟ್ಟೆ ಕುಲಾಲ ಸಂಘ ತನ್ನ ಕಾರ್ಯಗಳ ಮೂಲಕ ತೋರಿಸಿಕೊಟ್ಟಿದೆ. ಸಂಘಟನೆಯ ಮೂಲಕ ಸಮಾಜಕ್ಕೆ ಯಾವ ರೀತಿಯ ಪ್ರಯೋಜನವಾಗಬಹುದು ಡಎಂಬುದಕ್ಕೆ ಈ ಮನೆ ನಿರ್ಮಾಣ ಕಾರ್ಯ ಉತ್ತಮ ಉದಾಹರಣೆ. ಸಮಾಜದಲ್ಲಿ ಜಾತಿ ಸಂಘಟನೆಗಳು ಯಾಕೆ ಬೇಕು ಎಂದರೆ ಸಮಾಜದಲ್ಲಿರುವ ಇಂತಹ ಆಶಕ್ತರ ಉದ್ದಾರಕ್ಕೆ ಸಹಕರಿಸುವುದಕ್ಕೆ ಇರಬೇಕು ಎಂದು ಹೇಳಿದರು, ಮನೆ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿದ ಅಧ್ಯಕ್ಷರಾದ ಮನೋಜ್ ಕುಲಾಲ್  ಹಾಗೂ ಸರ್ವ ಸದಸ್ಯರನ್ನು ಮುಕ್ತ ಕಂಠದಿಂದ ಶ್ಲಾಸಿದರು.


ಇದೇ ಸಂದರ್ಭ ಬಂಟ್ವಾಳ ತಾಲೂಕು ಮಾಜಿ ತಾಲೂಕು ಪಂಚಾಯತ್ ಸದಸ್ಯ ಶ್ರೀ ಪ್ರಭಾಕರ ಪ್ರಭು, ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಮಾತೃ ಸಂಘದ

ಅಧ್ಯಕ್ಷ ಮಯೂರ್ ಉಳ್ಳಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಬಂಟ್ವಾಳ ಕುಲಾಲ ಸೇವಾದಳದ ದಳಪತಿ ಚಂದ್ರಶೇಖರ ಕಾಮಾಜೆ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ, ಯೋಗೀಶ್ ಆಚಾರ್ಯ ಕುಕ್ಕಿಪಾಡಿ, ಯುವಮೋರ್ಚಾ ನಿಕಟಪೂವಾಧ್ಯಕ್ಷ  ಸುದರ್ಶನ್ ಬಜ, ರತ್ನಕುಮಾರ್ ಚೌಟ, ನಾಗೇಶ್ ಬಿಲಾಡಿ, ಸಂತೋಷ್ ಕಾರ್ಕಳ, ಯಶೋಧರ ಉಪ್ಪಿರ, ಚೈತ್ರ ಸೂರ್ಯ ಉಪಸ್ಥಿತರಿದ್ದರು.


ಮನೆ ಸ್ವೀಕರಿಸಿದ  ಜಯಂತಿ ಅವರು ಸಂಘದ ಅಧ್ಯಕ್ಷರು ಹಾಗೂ ಪ್ರಮುಖರಿಗೆ ಶಾಲು ಹೊದಿಸಿ ಕೃತಜ್ಞತೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಮಾತನಾಡಿ 2002-03ರಲ್ಲಿ ಸೋಮಯ್ಯ ಕುಲಾಲ್ ಸಂಗಬೆಟ್ಟು ಅವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಸಂಘದ ಸ್ಥಾಪನೆಯಾಗಿತ್ತು. ಅಂದಿನಿಂದ ಸಂಘವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಶಯವಿತ್ತು. ಇದೀಗ ಶಾಶ್ವತ ಸೇವಾ ಯೋಜನೆಯ ಮೂಲಕ ಒಂದು ಕುಟುಂಬದ ಬದುಕಿಗೆ ಬೆಳಕಾಗಿರುವುದು ಸಂತಸದ ವಿಚಾರ ಎಂದರು.

ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು ಹಾಗೂ ಪ್ರಮುಖರನ್ನು ಗೌರವ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕುಮಾರಿ ಅಂಕಿತಾ ಸ್ವಾಗತಿಸಿದರು. ಕುಡ್ಕೋಳಿಬೈಲು ವರ್ಷಾ ಪ್ರಾರ್ಥಿಸಿದರು. ನಿರೂಪಕ ಸಂತೋಷ್ ಕುಲಾಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Leave a Comment