Coastal Bulletin

ಮೇಷ ಕೆಲವೊಂದು ವೈಯಕ್ತಿಕ ತೊಂದರೆಗಳಿಂದ ಮುಕ್ತಿ ಪಡೆಯುವಿರಿ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಕೆಲವೊಂದು ಅನಿವಾರ್ಯವಲ್ಲದ ಕೆಲಸ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಮಕ್ಕಳಿಗಾಗಿ ಬಂಡವಾಳ ಹೂಡಲು ಸಿದ್ಧರಾಗುವಿರಿ.

ವೃಷಭ

ಹಿರಿಯರ ಮನೋಭಿಲಾಷೆಗಳು ಈಗ ಈಡೇರುವ ಕಾಲ. ಯಾವುದೋ ಒಂದು ಸತ್ಯವನ್ನು ಅನ್ವೇಷಣೆ ಮಾಡಲು ಹೋಗಿ ಜಯ ಸಾಧಿಸುವಿರಿ. ಬಂಧುಗಳಿಂದ ಸಾಕಷ್ಟು ಸಹಕಾರ ದೊರೆತು ಮನೆಯ ನಿರ್ಮಾಣ ಕಾರ್ಯದಲ್ಲಿ ಕೆಲಸ ಸುಗಮವಾಗುತ್ತದೆ.

ಮಿಥುನ

ಪರಸ್ಪರ ಭಿನ್ನಾಭಿಪ್ರಾಯಗಳು ಮಾಯವಾಗಿ ದಾಂಪತ್ಯದಲ್ಲಿ ಸುಖ ಜೀವನಕ್ಕೆ ನಾಂದಿಯಾಗುತ್ತದೆ. ನಿಮ್ಮ ವಿರುದ್ಧ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುತ್ತದೆ. ಹೇಗೋ ಅದರ ಸುಳಿವು ನಿಮಗೆ ತಿಳಿದು ಅದರಿಂದ ಪಾರಾಗುವಿರಿ. 

ಕಟಕ

ಓದಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಗತಿ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಆಗುತ್ತವೆ. ದೃಢ ನಿರ್ಧಾರಗಳಿಂದ ವ್ಯವಹಾರದಲ್ಲಿ ಪಾಲ್ಗೊಳ್ಳದಿದ್ದರೆ ಸ್ವಲ್ಪ ನಷ್ಟವಾಗುವ ಸಂದರ್ಭವಿದೆ

ಸಿಂಹ

ಅನವಶ್ಯಕ ಪ್ರಯಾಣದಿಂದ ದೇಹಾಲಸ್ಯದ ಜೊತೆಗೆ ಧನನಷ್ಟವಾಗುತ್ತದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೆಚ್ಚು ಗಮನಕೊಡುವಿರಿ. ನಿಮ್ಮ ಉದ್ಯೋಗದಲ್ಲಿನ ಪ್ರಮುಖರನ್ನು ಭೇಟಿ ಮಾಡಿ ಉದ್ಯೋಗದಲ್ಲಿ ಮೇಲೇರುವ ಬಗ್ಗೆ ಚರ್ಚೆ ಮಾಡುವಿರಿ. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ.

ಕನ್ಯಾ

ರಾಸಾಯನಿಕ ವಸ್ತುಗಳನ್ನು ಆಮದು ರಫ್ತು ಮಾಡುವವರಿಗೆ ಉತ್ತಮ ವ್ಯವಹಾರವಿರುತ್ತದೆ. ನಿಮ್ಮ ಅನುಕೂಲವನ್ನು ಅನುಸರಿಸಿ ಸಮಯಕ್ಕೆ ತಕ್ಕಂತೆ ಜನಗಳ ಓಲೈಕೆ ಮಾಡುವಿರಿ

ತುಲಾ

ವ್ಯವಹಾರದಲ್ಲಿ ಪಾಲುದಾರರಿಂದ ವ್ಯವಹಾರಕ್ಕೆ ಪ್ರೋತ್ಸಾಹ ಇರುವುದು. ಮಕ್ಕಳಿಂದ ಮನಸ್ಸಿಗೆ ಚಿಂತೆ

ಮೂಡುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡುವವರಿಗೆ ಅಪವಾದ ಬರುವ ಸಾಧ್ಯತೆಗಳಿವೆ ಎಚ್ಚರ ವಹಿಸಿರಿ. ಹಿರಿಯ ಕಲಾವಿದರುಗಳಿಗೆ ಗೌರವಧನ ದೊರೆಯುವ ಸಾಧ್ಯತೆ ಇದೆ.

ವೃಶ್ಚಿಕ

ನಡವಳಿಕೆಯಿಂದ ನಿಮ್ಮ ವೈಯಕ್ತಿಕ ಜೀವನವನ್ನು ಉತ್ತಮಪಡಿಸಿಕೊಳ್ಳುವಿರಿ. ಸಾಮಾಜಿಕ ಚಿಂತನೆಗಳಿಂದ ಗೌರವಾದರಗಳನ್ನು ಪಡೆಯುವಿರಿ. ಮನಸ್ಸಿಗೆ ನೆಮ್ಮದಿಕೊಡುವ ಮಾರ್ಗವೊಂದು ನಿಮಗೆ ಗೋಚರವಾಗುತ್ತದೆ.

ಧನು

ಹಿರಿಯರು, ಸಂಬಂಧವಿಲ್ಲದ ವಿಷಯಗಳಲ್ಲಿ ಮೂಗು ತೂರಿಸಲು ಹೋಗಿ ಮುಜುಗರಕ್ಕೆ ಒಳಗಾಗುವ ಸಂದರ್ಭಗಳಿವೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಬಹಳ ಒಳ್ಳೆಯದು. ಮಕ್ಕಳಿಂದ ಸಾಕಷ್ಟು ಅನುಕೂಲ ಒದಗಿಬರುತ್ತದೆ.

ಮಕರ

ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಕೆಲವು ಸರ್ಕಾರಿ ಅಧಿಕಾರಿಗಳಿಗೆ ಯೋಜನೆಯನ್ನು ರೂಪಿಸುವ ಹೊಸ ಜವಾಬ್ದಾರಿ ದೊರೆಯುತ್ತದೆ.

ಕುಂಭ

ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಮಕೈ‌ಗೊಳ್ಳಿರಿ. ಬಾಲಬಡುಕರನ್ನು ಸ್ವಲ್ಪಮಟ್ಟಿಗೆ ದೂರವಿಡಿ. ವಿದೇಶಕ್ಕೆ ರಫ್ತು ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಧನಾದಾಯವಿದ್ದರೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು.

ಮೀನ

ಆರ್ಥಿಕ ಚೇತರಿಕೆ ಕಂಡರೂ ಖರ್ಚಿನ ವಿಷಯದಲ್ಲಿ ಎಚ್ಚರಿಕೆ ವಹಿಸಿರಿ. ಕೆಲವರೊಂದಿಗೆ ಅತಿಯಾದ ಸ್ನೇಹ ಸಂಬಂಧಗಳು ವೃದ್ಧಿಸುವ ಸಾಧ್ಯತೆ ಇದೆ. ಗೃಹಿಣಿಯರು ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ. ರೇಷ್ಮೆ ನೂಲು ತೆಗೆಯುವವರಿಗೆ ಬೇಡಿಕೆ ಬರುತ್ತದೆ. 


Leave a Comment