Coastal Bulletin

ಬಂಟ್ವಾಳ :ಪ್ರಸಕ್ತ ಸಮಾಜದಲ್ಲಿ ಗುರು ಹಿರಿಯರ ಮಾರ್ಗದರ್ಶನ ಜೊತೆಗೆ ಸಂಕುಚಿತ ಮನೋಭಾವ ತೊರೆದು ಹೆತ್ತವರನ್ನು ಗೌರವಿಸಿ ಸಂಸ್ಕಾರಯುತ ಜೀವನ ನಡೆಸುವ ಕೆಲಸ ಆಗಬೇಕು,ನಂಬಿಕೆ,ಶೃದ್ಧೆ,ದೃಢತೆ ನಮ್ಮ ಬದುಕಾಗಬೇಕು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ಸಮಾಜ ಸೇವಾ ಸಹಕಾರಿ ಸಂಘದ ಸಂಸ್ಥಾಪಕ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ. ಅಮ್ಮೆಂಬಳ ಬಾಳಪ್ಪ ಅವರ 100 ನೇ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ' ಸಮಾಜ ಸೇವಾ ಸಹಕಾರಿ ಸವಿ ಸಂಭ್ರಮ-2022' ಕಾರ್ಯಕ್ರಮ ದಲ್ಲಿ ಅವರು ಆಶೀರ್ವಚನ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಡಾ. ಅಮ್ಮೆಂಬಳ ಬಾಳಪ್ಪರಂತಹ ಹೋರಾಟಗಾರರ ನಿಸ್ವಾರ್ಥ ಸೇವೆಯ ಫಲವಾಗಿ ನಾವಿಂದು ಸಂತೋಷದ ಜೀವನ ಸಾಗಿಸುತ್ತಿದ್ದು, ಅವರು ನಮ್ಮ ಜಿಲ್ಲೆಯ ಹೆಮ್ಮೆಯಾಗಿದ್ದಾರೆ ಎಂದರು 

ಶಾಸಕ ರಾಜೇಶ ನಾಯ್ಕ ಉಳಿಪಾಡಿಗುತ್ತು ಮಾತನಾಡಿ, ಸಂಘದ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಸುರೇಶ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲ್ಲಡ್ಕ ರೈತರ ಸಹಕಾರಿ ಸಂಘದ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ, ಪ್ರಾದ್ಯಾಪಕ ಡಾ.ದುಗ್ಗಪ್ಪ ಕಡೆಕಾರ್ ಮತ್ತಿತರರು ಶುಭ ಹಾರೈಸಿದರು. ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ್ ಮತ್ತಿತರು

ಉಪಸ್ಥಿತರಿದ್ದರು.

ಇದೇ ವೇಳೆ ದೇರಳಕಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ತಂಡದಿಂದ 'ಉಚಿತ ನೇತ್ರ ತಪಾಸಣಾ ಶಿಬಿರ' ಮತ್ತು ಕನ್ನಡ ವಿತರಣೆ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ, ಸ್ವ ಸಹಾಯ ಸಂಘಗಳ ಸಮ್ಮಿಲನ ಮತ್ತು ಅಭಿನಂದನೆ, ಹಿರಿಯ ಸಹಕಾರಿ ಧುರೀಣ ಪೆರ್ಡೂರು ರಾಮ ಕುಲಾಲ್ ಇವರಿಗೆ ಡಾ.ಅಮ್ಮೆಂಬಳ ಬಾಳಪ್ಪ ಪ್ರಶಸ್ತಿ ಪ್ರದಾನ ನಡೆಯಿತು.

ಸಂಘದ ಉಪಾಧ್ಯಕ್ಷ ಪದ್ಮನಾಭ, ನಿರ್ದೇಶಕ ಜನಾರ್ದನ ಬೊಂಡಾಲ, ವಿ. ವಿಜಯ ಕುಮಾರ್, ನಾಗೇಶ್ ಬಾಳೇಲು ಸತೀಶ ಪಲ್ಲಮಜಲ್, ವಿಜಯಕುಮಾರ್ ವಿಟ್ಲ, ವಾಮನ ಟೈಲರ್,ಗಣೇಶ್ ಸಮಗಾರ. ಜಗಣ್ಣಿವಾಸ ಗೌಡ. ಶ್ರೀಮತಿ ವಿದ್ಯಾ ಶ್ರೀಮತಿ ಜಯಂತಿ ರಮೇಶ್ ಬಿ ಸಾಲಿಯಾನ್. ರಮೇಶ್ ಸಾಲಿಯಾನ್ ಸಂಚಯಾಗಿರಿ. ಸುರೇಶ್ ಎನ್ .  ಮತ್ತಿತರರು ಉಪಸ್ಥಿತರಿದ್ದರು.

ನಿರ್ದೇಶಕ ರಮೇಶ ಸಾಲ್ಯಾನ್ ಸ್ವಾಗತಿಸಿ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಾಸ್ತಾವಿಕ ಮಾತನಾಡಿದರು. ಅರುಣ್ ಕುಮಾರ್ ವಂದಿಸಿ, ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನದ ಬಳಿಕ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಯಕ್ಷಗಾನ ಬಯಲಾಟ ನಡೆಯಿತು.

Leave a Comment