ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ತೇಜೋವದೆ ಪೋಲೀಸ್ ಠಾಣೆಗೆ ಜ್ಯೋತಿಷಿ ಅನಿಲ್ ಪಂಡಿತ್ ದೂರು

Coastal Bulletin
ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ತೇಜೋವದೆ ಪೋಲೀಸ್ ಠಾಣೆಗೆ ಜ್ಯೋತಿಷಿ ಅನಿಲ್ ಪಂಡಿತ್ ದೂರು

ಬಂಟ್ವಾಳ: ವೈಯಕ್ತಿಕ ತೇಜೋವದೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಮಾನಕರ ಸಂದೇಶ ಹರಿಬಿಟ್ಟವರ ವಿರುದ್ಧ ಕ್ರಮಕ್ಕೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ಜ್ಯೋತಿಷಿ ಅನಿಲ್ ಪಂಡಿತ್ ದೂರು ನೀಡಿದ್ದಾರೆ.

ಹಲವು ವರ್ಷಗಳಿಂದ ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾವಿಣ್ಯತೆ ಪಡೆದು ಸ್ವಂತ ಕಚೇರಿ ಮೂಲಕ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿರುವ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಮಾನಕರ ಹಾಗೂ ಮಾನಹಾನಿಕರ ಸಂದೇಶಗಳನ್ನು ಹರಿಬಿಡಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ

ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮನವಿ ನೀಡುವ  ಸಂದರ್ಭದಲ್ಲಿ ಅನಿಲ್ ಪಂಡಿತ್ ಅವರ ಜೊತೆ ಹಿಂದೂ ಸಂಘಟನೆಗಳ ಪ್ರಮುಖರು ಜೊತೆಯಾದರು.ಪ್ರಮುಖರಾದ ಭಕ್ತಿಭೂಷಣ್ ದಾಸ್ ಪ್ರಭುಜಿ,  ತಾರಾನಾಥ ಕೊಟ್ಟಾರಿ, ಅಶೋಕ್ ಶೆಟ್ಟಿ ಸರಪಾಡಿ, ದಾಮೋದರ ನೆತ್ತರಕೆರೆ, ಪ್ರಶಾಂತ್ ಕೆಂಪುಗುಡ್ಡೆ, ಸಂತೋಷ್ ಸರಪಾಡಿ, ರಮಿತಾಸೂರ್ಯವಂಶಿ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.


Leave a Comment