ಬಂಟ್ವಾಳ : ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆಯಲ್ಲಿ ಬಿರುಗಾಳಿ ಹಾಗೂ ಭಾರೀ ಮಳೆಯಿಂದ ಜಯ ಸಪಲ್ಯ ಅವರ ಮನೆಯ ಛಾವಣಿ ಕುಸಿದು ಹಾನಿಗೊಳಗಾದ ಸ್ಥಳಕ್ಕೆ ಹಾಗೂ ಸಜಿಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಚಂದ್ರಹಾಸ ಪೂಜಾರಿ ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಟುಂಬದ ಸದಸ್ಯರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿ ಸರ್ಕಾರದ
ನಿಯಮಾನುಸಾರ ತುರ್ತು ಪರಿಹಾರ ಮತ್ತು ಅಗತ್ಯ ನೆರವು ಶೀಘ್ರದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
















