ಬಿ.ಸಿ.ರೋಡ್: 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪದಾಧಿಕಾರಿಗಳ ಆಯ್ಕೆ

Coastal Bulletin
ಬಿ.ಸಿ.ರೋಡ್: 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ, ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ನಡೆಯಲಿರುವ 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸಮಿತಿ ರಚನಾ ಸಭೆಯು ಜುಲೈ 26ರಂದು ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ 2026ನೇ ಸಾಲಿನ ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ಆಚರಿಸಲು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಲತಬೆಟ್ಟು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ, ಭಾಸ್ಕರ್ ಟೈಲರ್ ಕಾಮಾಜೆ ಹಾಗೂ ಚರಣ್ ಜುಮಾದಿಗುಡ್ಡೆ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಎಂ. ಸತೀಶ್ ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾಗಿ ರಾಜೇಶ್ ಬಿ. ಮಹಾಕಾಳಿಬೆಟ್ಟು ಹಾಗೂ ಪ್ರದೀಪ್ ಕೆ.ಎನ್. ಬಿ.ಸಿ.ರೋಡ್ ಆಯ್ಕೆಯಾದರು.

ಖಜಾಂಚಿಯಾಗಿ ಎನ್. ಶ್ರೀಧರ್

ಶೆಣೈ, ಜಂಟಿ ಖಜಾಂಚಿಯಾಗಿ ಆಶಾ ಪಿ. ರೈ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿರಣ್ ಕುಮಾರ್, ಶ್ರೀಧರ್ ಅಲೆತ್ತೂರು, ನರೇಶ್ ಹೊಳ್ಳ ಕಲ್ಲಿಮಾರ್, ಶರತ್ ಕುಮಾರ್ ಪ್ರಣಾಮ್, ಅಜ್ಜಿಬೆಟ್ಟು, ಗೀತಾ ವೈ. ಶೆಟ್ಟಿ, ಲಕ್ಷಣ್‌ರಾಜ್, ಮಾಧವ ಕೈಕುಂಜೆ, ನವೀನ್ ಶೆಟ್ಟಿ ಮಿತ್ತಬೈಲು, ನಾಗೇಶ್ ಟೈಲರ್, ಭೋಜ ಸಾಲ್ಯಾನ್, ಶೈಲೇಶ್ ಕೈಕುಂಜೆ ಹಾಗೂ ಅಕ್ಷಯ್ ಕಾಮಾಜೆ ಅವರನ್ನು ಆಯ್ಕೆ ಮಾಡಲಾಯಿತು.

Leave a Comment