ನೆತ್ತರಕೆರೆ :ನೇತ್ರಾವತಿ ಮಾತೃ ಮಂಡಳಿ ಅಶ್ರಯದಲ್ಲಿ 14ನೇ ವರ್ಷದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ. ತುಳುನಾಡಿನ ಮೆದು ಮಣ್ಣಿನಲ್ಲಿ ಜನಿಸಿದ ತುಳುವರು ಮೃದು ಮನಸ್ಸಿನವರು: ಪ್ರಿಯಾಂಕಾ ಸುಳ್ಯ

Coastal Bulletin
ನೆತ್ತರಕೆರೆ :ನೇತ್ರಾವತಿ ಮಾತೃ ಮಂಡಳಿ ಅಶ್ರಯದಲ್ಲಿ 14ನೇ ವರ್ಷದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ. ತುಳುನಾಡಿನ ಮೆದು ಮಣ್ಣಿನಲ್ಲಿ ಜನಿಸಿದ ತುಳುವರು ಮೃದು ಮನಸ್ಸಿನವರು: ಪ್ರಿಯಾಂಕಾ ಸುಳ್ಯ

ಬಂಟ್ವಾಳ :ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಆಶ್ರಯದಲ್ಲಿ 14ನೇ ವರ್ಷದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮವು ಜು. 26ರಂದು ಬೆಳಿಗ್ಗೆ ನೆತ್ತರಕೆರೆ ವಸಂತಿ ವಿಠ್ಠಲ್ ಶೆಟ್ಟಿ ಮುಂಡಾಜೆಗುತ್ತು ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಎಡುವೆಂಚರ್ ಪಿ ಯು ಕಾಲೇಜಿನ ಕನ್ನಡ ಉಪನ್ಯಾಸಕಿ ಪ್ರಿಯಾಂಕಾ ಸುಳ್ಯ ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಮೆದು ಮಣ್ಣಿನಲ್ಲಿ ಜನಿಸಿದ ತುಳುವರು ಮೃದು ಮನಸ್ಸಿನವರು,ಪುಣ್ಯ ಭೂಮಿಯಾದ ತುಳುನಾಡಿನ ಆಷಾಡ ಮಾಸದ ಮಹತ್ವ ಹಾಗೂ ನಮ್ಮ ಸಂಸ್ಕೃತಿ ಪರಂಪರೆಯನ್ನು ಅನಾವರಣಗೊಳಿಸುವ "ಆಟಿಡೊಂಜಿ ಗಮ್ಮತ್" ಮುಂದಿನ ತಲೆಮಾರುಗಳಿಗೆ ಅಗತ್ಯವಾಗಿ ತಲುಪಿಸುವ ಮಹತ್ತರವಾದ ಕಾರ್ಯಕ್ರಮ, ನೇತ್ರಾವತಿ ಮಾತೃ ಮಂಡಳಿಯಿಂದ ಶ್ಲಾಘನೀಯ ಕಾರ್ಯ ನಡೆದಿದೆ ಎಂದರು.

ಬಳಿಕ ವಿವಿಧ ಸ್ಪರ್ಧೆಗಳು ನಡೆದು ಮದ್ಯಾಹ್ನ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಎಡುವೆಂಚರ್ ಪಿ ಯು ಕಾಲೇಜಿನ ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ ಅಥಿತಿಯಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ

ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟು ಶುಭ ಹಾರೈಸಿದರು.

ಬಳಿಕ ಮಾತೃ ಮಂಡಳಿಯ ಸದಸ್ಯೆಯರು ಮನೆಯಲ್ಲಿ ತಯಾರಿಸಿ ತಂದ ಸುಮಾರು 40ವಿವಿಧ ಬಗೆಯ ಆಷಾಡ ಮಾಸದ ವಿಶೇಷ ಖಾದ್ಯಗಳ ಸಹಭೋಜನ ನಡೆಯಿತು.

ವೇದಿಕೆಯಲ್ಲಿ ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಶೇಖರ್, ಸಂಚಾಲಕಿ ಲಲಿತ ಸುಂದರ್, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ಎನ್, ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್, ಗ್ರಾಮ ವಿಕಾಸ ಪ್ರತಿಷ್ಠಾನದ ಸಂಚಾಲಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು

ಶಶಿಕಲಾ ಟೀಚರ್ ಸ್ವಾಗತಿಸಿ, ಜಯಂತಿ ವಿಶ್ವನಾಥ ಹಾಗೂ ಕು ವರ್ಷ ಕಾರ್ಯಕ್ರಮ ನಿರೂಪಿಸಿದರು, ಕು ಸಿಂಧು, ಕು ಜನನಿ, ಕು ನಿವೇದಿತಾ, ಕು ಶ್ರಾವ್ಯ ಸಹಕರಿಸಿದರು.

Leave a Comment