ಪರಂಗಿಪೇಟೆ: ಕೆನರಾ ಬ್ಯಾಂಕ್ ಕಳವು ಯತ್ನ, ಪ್ರಕರಣದ‌ ಪ್ರಮುಖ ಆರೋಪಿಯ ಬಂಧನ

Coastal Bulletin
ಪರಂಗಿಪೇಟೆ: ಕೆನರಾ ಬ್ಯಾಂಕ್ ಕಳವು ಯತ್ನ, ಪ್ರಕರಣದ‌ ಪ್ರಮುಖ ಆರೋಪಿಯ ಬಂಧನ

ಬಂಟ್ವಾಳ: ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆ ಎಂಬಲ್ಲಿ ಕಾರ್ಯಚರಿಸುತ್ತಿದ್ದ ಕೆನರಾ ಬ್ಯಾಂಕಿನ ಮೇಲ್ಛಾವಣಿಯನ್ನು ಕೊರೆದು ಒಳಪ್ರವೇಶಿಸಿ ಹಣ ಮತ್ತು ಚಿನ್ನಾಭರಣಗಳನ್ನು ಕಳವಿಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ಪ್ರಮುಖ ಆರೋಪಿಯ ಬಂಧನವಾಗಿದೆ.

ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳ ಪೈಕಿ  ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸುಜೀರು ಬದಿಗುಡ್ಡೆ ನಿವಾಸಿ  ಮೊಹಮ್ಮದ್  ಶಾಖಿರ್ (33)

ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜು.22 ರಂದು ದಸ್ತಗಿರಿ ಮಾಡಿದ್ದಾರೆ,ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.

Leave a Comment