ಬಂಟ್ವಾಳ:ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ನವೋದಯ ಆಟೋರಿಕ್ಷಾ ಚಾಲಕರ ಮಾಲಕರ ಸಂಘ (ರಿ.) ವತಿಯಿಂದ ನೂತನ ಆಂಬುಲೆನ್ಸ್ ಸೇವೆಯ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನ. 1ರಂದು ಸಂಜೆ ಬಡಕಬೈಲು ಜಂಕ್ಷನ್ನಲ್ಲಿ ನಡೆಯಿತು.
ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ, ಬಡಕಬೈಲು ಸಂತ ಡೊಮಿನಿಕ್ ಶಾಲೆಯ ಪ್ರಾಂಶುಪಾಲ ಫಾ.ಫ್ರಾನ್ಸಿಸ್ ಅರುಣ್ ಡಿ ಸೋಜಾ,ಬಡಕಬೈಲು ಬದ್ರಿಯಾ ಜುಮಾ ಮಸೀದಿ ಖತೀಬರಾದ ಡಿ.ಎಸ್. ಅಬ್ದುಲ್ ರಹಾಮಾನ್ ಮದನಿ, ಆಂಬುಲೆನ್ಸ್ ಸೇವೆಯ ಲೋಕಾರ್ಪಣೆಗೊಳಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಮಾತನಾಡಿ, ಸೇವೆ ಎಂಬುದು ದೈವಿಕ ಗುಣ. ಸಮಾಜದ ಹಿತದೃಷ್ಟಿಯಿಂದ ಇಂತಹ ವಾಹನದ ಅವಶ್ಯಕತೆ ಬಹಳಷ್ಟಿದೆ. ಈ ಆಂಬುಲೆನ್ಸ್ ಸೇವೆಯ ಸದುಪಯೋಗ ಜಾತಿ, ಧರ್ಮದ ಭೇದವಿಲ್ಲದೆ ಸಮಾಜದ ಎಲ್ಲರಿಗೂ ದೊರೆಯುವಂತಾಗಲಿ. ವಿಶಾಲ ಹೃದಯದಿಂದ ಎಲ್ಲರೊಂದಿಗೆ ಬೆರೆತು ಸಮಾಜದ ಒಳಿತಿಗಾಗಿ ಶ್ರಮಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಹೇಳಿದರು.
ಸಂತ ಡೊಮಿನಿಕ್ ಶಾಲೆಯ ಪ್ರಾಂಶುಪಾಲ ಫಾ.ಫ್ರಾನ್ಸಿಸ್ ಅರುಣ್ ಡಿ ಸೋಜಾ ಮಾತನಾಡಿ,ರಿಕ್ಷಾ ಚಾಲಕರಿಗೆ ಜನರ ಕಷ್ಟ-ನೋವುಗಳು ಹಾಗೂ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಇಂತಹ ಸಾಮಾಜಿಕ ಕಾಳಜಿಯ ಫಲವಾಗಿ ಆಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಮಾನವೀಯತೆಯೇ ನಿಜವಾದ ಮಾನವ ಧರ್ಮ ಎಂದರು.
ಬಡಕಬೈಲು ಬದ್ರಿಯಾ ಜುಮಾ ಮಸೀದಿ ಖತೀಬರಾದ ಡಿ.ಎಸ್. ಅಬ್ದುಲ್ ರಹಾಮಾನ್ ಮದನಿ ಮಾತನಾಡಿ ದಿನನಿತ್ಯ ಜನರ ಸಂಕಷ್ಟ ಹಾಗೂ ಸಂತೋಷಗಳನ್ನು ಹತ್ತಿರದಿಂದ ಕಾಣುವ ರಿಕ್ಷಾ ಚಾಲಕರು ಸದಾ ಸಮಾಜಸೇವೆಗೆ ಸಿದ್ಧರಾಗಿರುವುದು ಶ್ಲಾಘನೀಯ. ಅವರ ಸಮಾಜಮುಖಿ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ ಪಿ ವೆಂಕಟೇಶ್ ತಂತ್ರಿ, ಚೆನ್ನಪ್ಪ ಪೂಜಾರಿ ಬಡಕಬೈಲು, ಈಶ್ವರ ಪೂಜಾರಿ ಕಲಾಯಿ, ಸಾರಮ್ಮ, ಕೆ ಇ ದೇವಕಿ ಪೂವಪ್ಪ ಕುಲಾಲ್,
ಯಶೋಧ ಗೋಪಾಲ ಅಂಚನ್, ರೇಣುಕಾ ಶೇಖರ ಬಂಗೇರ, ಬಿ ಮೋಹನ್ ಕುಮಾರ್ ಅಮ್ಮುಂಜೆ, ಚಂದ್ರಶೇಖರ ಸುವರ್ಣ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧಕ ವಿದ್ಯಾರ್ಥಿಗಳಾದ ಕ್ಷಮಾ ಎ ಆಚಾರ್ಯ, ಸೋನಲ್ ವೈ ವಿ, ಶೃತಿ ಕುಲಾಲ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೋದಯ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮೊಹಮ್ಮದ್ ಶೆರೀಫ್ ವಹಿಸಿದ್ದರು,
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ ನಾವಡ ಪೊಳಲಿ, ಆಸರೆ ಸೇವಾ ಪೌಂಡೇಶನ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ,ನವೋದಯ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ನಿರ್ದೇಶಕ ಸುಕೇಶ ಚೌಟ,ನವೋದಯ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಇಬ್ರಾಹಿಂ ನವಾಜ್,ಉದ್ಯಮಿ ಉಮೇಶ ಸಾಲ್ಯಾನ್ ಬೆಂಜನ ಪದವು, ಬಂಟ್ವಾಳ ರೈತ ಸಲಹಾ ಸಮಿತಿ ಅಧ್ಯಕ್ಷ ಡಿ ಎ ಅಬೂಬಕ್ಕರ್ ಅಮ್ಮುಂಜೆ, ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಗೋಪಾಲ ಅಂಚನ್, ಉದ್ಯಮಿ ಪುತ್ತು ಮೋನು ಬಟ್ಲಬೆಟ್ಟು, ಉದ್ಯಮಿ ಚಂದ್ರಶೇಖರ ಶೆಟ್ಟಿ, ಪ್ರಗತಿಪರ ಕೃಷಿಕ ಲೊರೆನ್ಸ್ ಫೆರ್ನಾಂಡಿಸ್ ಮಜ್ಜಿಬೈಲು, ನಾರಾಯಣ ಬಡಕಬೈಲು ಸಲಹೆಗಾರರು ಆಟೋ ರಿಕ್ಷಾ ಚಾಲಕ ಮಾಲಕ ಸಂಘ. ಅಹ್ಮದ್ ಬಷೀರ್ ನಿರ್ದೇಶಕರು ಆಟೋ ಚಾಲಕ ಮಾಲಕ ಸಂಘ, ಶೂರದಾಸ್ ಕೋಶಾಧಿಕಾರಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘ ಉಪಸ್ಥಿತರಿದ್ದರು.
ಅಕ್ಬರ್ ಸ್ವಾಗತಿಸಿ, ಅಹ್ಮದ್ ಬಶೀರ್ ವರದಿ ವಾಚಿಸಿದರು, ಖ್ಯಾತ ಯಕ್ಷಗಾನ ಸಂಘಟಕ ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.









