ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯೋತ್ಸವ ಆಚರಣೆ

Coastal Bulletin
ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯೋತ್ಸವ ಆಚರಣೆ

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಆಶ್ರಯದಲ್ಲಿ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆ ಕನ್ನಡ ಧ್ವಜಾರೋಹಣ ನ.1ರಂದು ಬೆಳಗ್ಗೆ ನಡೆಯಿತು.

ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಸಂದೇಶ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಪದಾಧಿಕಾರಿ ಸಂಕಪ್ಪ ಶೆಟ್ಟಿ ಸಂಚಯಗಿರಿ, ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವ ಶಾಲೆಗಳು ಇಂದು ಬಡವಾಗುತ್ತಿದ್ದು, ಈ ಕುರಿತು ಗಮನಹರಿಸಬೇಕು. ಕನ್ನಡ ಭಾಷೆ ಮಾತನಾಡುವ ವಿಚಾರದಲ್ಲಿ ಕೀಳರಿಮೆ ಸಲ್ಲದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ

ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ, ತಾಲೂಕು ಕಸಾಪ ಗೌರವ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ನೂಜಿಪ್ಪಾಡಿ, ವಿ.ಸು.ಭಟ್, ಹೋಬಳಿ ಅಧ್ಯಕ್ಷ ಪಿ.ಮುಹಮ್ಮದ್, ಹಾಗೂ ಪದಾಧಿಕಾರಿಗಳು ಮತ್ತು ಕನ್ನಡಾಭಿಮಾನಿಗಳಾದ ರವೀಂದ್ರ ಕುಕ್ಕಾಜೆ, ಉಮೇಶ್ ಕುಮಾರ್ ವೈ, ರಜನಿ ಚಿಕ್ಕಯ್ಯಮಠ, ಅಬುಬಕರ್ ಅಮ್ಮುಂಜೆ, ಸಲೀಂ ಬೋಳಂಗಡಿ, ಜಯರಾಮ ಪಡ್ರೆ, ಸಾಯಿರಾಮ ನಾಯಕ್, ಹರೀಶ ಮಾಂಬಾಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment