ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರದ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 71 ಸಾಧಕರ ಪೈಕಿ ಬಂಟ್ವಾಳದ ಹಿರಿಯ ಸಾಧಕ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಅವರೂ ಒಬ್ಬರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದಲ್ಲಿ ಜನಿಸಿದ ಎ.ಸಿ. ಭಂಡಾರಿ ತುಳು ಭಾಷೆ , ಸಾಹಿತ್ಯ, ರಂಗಭೂಮಿ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ದೀರ್ಘಕಾಲದಿಂದ ನಿರಂತರ ಸೇವೆ ಸಲ್ಲಿಸಿ 84ರ ಹರೆಯದಲ್ಲೂ ಸಕ್ರಿಯರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪಡೆದಿರುವ
ಅವರು, ಪ್ರಸಕ್ತ ಬಂಟ್ವಾಳ ತುಳು ಕೂಟದ ಗೌರವಾಧ್ಯಕ್ಷರಾಗಿ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಮಾರ್ಗದರ್ಶಕರಾಗಿ ಯುವಜನತೆಗೆ ದಾರಿದೀಪವಾಗಿದ್ದಾರೆ.
ಹಿರಿಯ ವಯಸ್ಸಿನಲ್ಲೂ ಸಮಾಜ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಎ.ಸಿ. ಭಂಡಾರಿಯವರಿಗೆ ಅರ್ಹವಾಗಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.








