ತುಂಬೆ: ಕುಲಾಲ ಯುವ ವೇದಿಕೆ ಅಶ್ರಯದಲ್ಲಿ ಸರ್ಕಾರಿ ಶಾಲಾ ವಠಾರದಲ್ಲಿ ಸ್ವಚ್ಛತಾ ಶ್ರಮದಾನ.

Coastal Bulletin
ತುಂಬೆ: ಕುಲಾಲ ಯುವ ವೇದಿಕೆ ಅಶ್ರಯದಲ್ಲಿ ಸರ್ಕಾರಿ ಶಾಲಾ ವಠಾರದಲ್ಲಿ ಸ್ವಚ್ಛತಾ ಶ್ರಮದಾನ.

ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ, ಮಹಿಳಾ ಸಂಘಟನೆಗಳ ಒಕ್ಕೂಟ ಹಾಗೂ ಕುಲಾಲ ಸೇವಾ ಸಂಘ ತುಂಬೆ ಇವುಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತುಂಬೆಯ ವಠಾರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶೇಷಪ್ಪ ಮಾಸ್ಟರ್, ಶಾಲಾ ವಠಾರ ಹಾಗೂ ಸ್ಮಶಾನದ ಪರಿಸರ ಸ್ವಚ್ಛತೆ, ಆರ್ಥಿಕವಾಗಿ ದುರ್ಬಲರಿಗೆ ಮನೆ ನಿರ್ಮಿಸಿಕೊಡುವುದು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಸಂಘಟನೆಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವೇದಿಕೆಯ ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ವೇದಿಕೆಯ ಮಹಿಳಾ ರಾಜ್ಯಾಧ್ಯಕ್ಷೆ ಭಾರತಿ ಶೇಷಪ್ಪ, ಬಂಟ್ವಾಳ ಮಹಿಳಾ ಘಟಕದ ಅಧ್ಯಕ್ಷೆ ದುರ್ಗಾಶ್ರೀ, ತುಂಬೆ ಸಂಘದ ಅಧ್ಯಕ್ಷ ಭಾಸ್ಕರ್ ಕುಲಾಲ್, ಕಾರ್ಯದರ್ಶಿ

ಸದಾನಂದ ಬಂಗೇರ, ಕೋಶಾಧಿಕಾರಿ ಹರೀಶ್ ಪೆರ್ಲಬೈಲು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಂದೀಪ್ ಕುಲಾಲ್, ಲಿಂಗಪ್ಪ ಕುಲಾಲ್, ದಿನೇಶ್ ಪೆರ್ಲಬೈಲು, ಪಾರ್ವತಿ ಐತಪ್ಪ, ಶೋಭಾ ಸದಾನಂದ, ಶೋಭಾ ಭಾಸ್ಕರ್, ಉಮಾವತಿ ಲಿಂಗಪ್ಪ, ಮಾಲತಿ ದಿನೇಶ್, ವೇದಿಕೆ ಸದಸ್ಯರಾದ ಸಂತೋಷ ಮರ್ತಾಜೆ, ನಾರಾಯಣ ಭಂಡಾರಿ ಬೆಟ್ಟು, ರಾಮಚಂದ್ರ ಭಂಡಾರಿ ಬೆಟ್ಟು, ಪುರುಷೋತ್ತಮ ಹಾಲಾಡಿ, ಅಶೋಕ ಸಂಚಯಗಿರಿ, ವಿಜಯಶ್ರೀ ಪುರುಷೋತ್ತಮ ಹಾಗೂ ಸೌಮ್ಯ ಸುಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಂದಿಸಿದರು.

Leave a Comment