ಐನೂರ ಪಳಿಕೆ: ಶ್ರೀ ಸ್ವಾಮಿ ಕೊರಗಜ್ಜ ಪೀಠದ ನೂತನ ಆಡಳಿತ ಸಮಿತಿ ರಚನೆ.

Coastal Bulletin
ಐನೂರ ಪಳಿಕೆ: ಶ್ರೀ ಸ್ವಾಮಿ ಕೊರಗಜ್ಜ ಪೀಠದ ನೂತನ ಆಡಳಿತ ಸಮಿತಿ ರಚನೆ.

ಬಂಟ್ವಾಳ: ಐನೂರ ಪಳಿಕೆ, ಸರಸ್ವತಿ ನಗರ (ಪಕ್ಕಳಪಾದೆ), ಮೇರಮಜಲು ಶ್ರೀ ಸ್ವಾಮಿ ಕೊರಗಜ್ಜ ಪೀಠದ ವಾರ್ಷಿಕ ಮಹಾಸಭೆಯು ಅ. 25ರಂದು ಭಾನುವಾರ ಪೀಠದ ವಠಾರದಲ್ಲಿ ನಡೆಯಿತು.


ಸಭೆಯಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಮಾಣೂರು ನೀರುಮಾರ್ಗ ಶ್ರೀ ಸುಬ್ರಾಯ ದೇವಸ್ಥಾನದ ಮುಕ್ತೇಸರರಾದ ಮುರಳೀಧರ ಕರ್ಕೇರ, ಅಧ್ಯಕ್ಷರಾಗಿ ಹರೀಶ್ ನಾಲದೆ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ರವಿರಾಜ್ ಐನೂರ ಪಳಿಕೆ ಹಾಗೂ ಕೋಶಾಧಿಕಾರಿಯಾಗಿ ಉಮೇಶ್ ಅರ್ಕುಳಬೈಲ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಆನಂದ

ಪಕ್ಕಳಪಾದೆ, ಪ್ರದೀಪ್ ಸರಸ್ವತಿ ನಗರ ಹಾಗೂ ಮಂಜುನಾಥ ಪಕ್ಕಳಪಾದೆ, ಜತೆ ಕಾರ್ಯದರ್ಶಿಗಳಾಗಿ ಧನುಷ್ ಸರಸ್ವತಿ ನಗರ, ಚಂದ್ರಹಾಸ ಪಕ್ಕಳಪಾದೆ, ಹರ್ಷಿತ್ ಪಕ್ಕಳಪಾದೆ ಹಾಗೂ ಜಯಂತ ಪಕ್ಕಳಪಾದೆ ಆಯ್ಕೆಯಾದರು. ಲೆಕ್ಕ ಪರಿಶೋಧಕರಾಗಿ ನಿಶಾನ್ ಪಕ್ಕಳಪಾದೆ ಆಯ್ಕೆಯಾದರು.

ಸಭೆಯಲ್ಲಿ ಮುಂದಿನ ದಿನಗಳಲ್ಲಿ ಶ್ರೀ ಕೊರಗಜ್ಜ ಪೀಠದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಸಲಾಯಿತು.

Leave a Comment