ಸುಜೀರು :ಶ್ರೀ ವೀರ ಹನುಮಾನ್ ಮಂದಿರದ ರಜತ ಮಹೋತ್ಸವ ಸಿದ್ಧತೆ ವೀಕ್ಷಿಸಿದ ಸಂಸದ ಬ್ರಿಜೇಶ್ ಚೌಟ.

Coastal Bulletin
ಸುಜೀರು :ಶ್ರೀ ವೀರ ಹನುಮಾನ್ ಮಂದಿರದ ರಜತ ಮಹೋತ್ಸವ ಸಿದ್ಧತೆ ವೀಕ್ಷಿಸಿದ ಸಂಸದ ಬ್ರಿಜೇಶ್ ಚೌಟ.

ಬಂಟ್ವಾಳ: ಸುಜೀರು ದತ್ತನಗರದ ಶ್ರೀ ವೀರ ಹನುಮಾನ್ ಮಂದಿರ (ರಿ.) ವತಿಯಿಂದ ಜನವರಿ 16 ಮತ್ತು 17ರಂದು ನಡೆಯಲಿರುವ ರಜತ ಮಹೋತ್ಸವದ ಸಿದ್ಧತೆಗಳನ್ನು ವೀಕ್ಷಿಸಲು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂದಿರಕ್ಕೆ ಭೇಟಿ ನೀಡಿದರು


ಈ ಸಂದರ್ಭದಲ್ಲಿ ನೂತನ ಸಭಾಂಗಣದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು ಹಾಗೂ ಮಹೋತ್ಸವದ ಸಿದ್ಧತೆಗಳು, ಕಾರ್ಯಕ್ರಮಗಳ ಆಯೋಜನೆ ಹಾಗೂ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಮಾಹಿತಿ ಪಡೆದುಕೊಂಡರು. ರಜತ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪೊಳಲಿ ಗಿರಿಪ್ರಕಾಶ ತಂತ್ರಿ, ಪ್ರಕಾಶ್ಚಂದ್ರ

ರೈ ದೇವಸ್ಯ, ಸುರೇಂದ್ರ ಕಂಬಳಿ ಸುಜೀರು ಬೀಡು,ಗಣೇಶ್ ಎಸ್. ದತ್ತನಗರ, ಗಣೇಶ್ ಸುವರ್ಣ ತುಂಬೆ, ಮನೋಜ್ ಆಚಾರ್ಯ ನಾಣ್ಯ, ರವೀಂದ್ರ ದತ್ತನಗರ, ಸಂದೀಪ್ ದತ್ತನಗರ, ಜಯ ಬೆಳ್ಚಡ, ಪುರುಷೋತ್ತಮ್ ದತ್ತನಗರ, ಬಾಬು ಪೂಜಾರಿ ಕೊಡಂಗೆ, ಮಾಲತಿ ಶೆಟ್ಟಿ, ಮೀನಾಕ್ಷಿ,ದೀಪಕ್ ಸುಜೀರ್ ದೆಯಡ್ಕ, ಶ್ರವಣ ಸೇನವ, ಯಶವಂತ, ಸೇರಿದಂತೆ ಮಂದಿರದ ಪದಾಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Leave a Comment