ಬಂಟ್ವಾಳ: ಮಂಗಳೂರಿನ ಕೆನರಾ ಕಾಲೇಜಿನ (ಸ್ವಾಯತ್ತ) ಫೈನ್ ಆರ್ಟ್ಸ್ ಅಸೋಸಿಯೇಷನ್ ವತಿಯಿಂದ ಅ.30ರಂದು ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ಕ್ಯಾನ್-ಕಲೋತ್ಸವ 2026’ರಲ್ಲಿ ಬಂಟ್ವಾಳದ ಎಸ್.ವಿ.ಎಸ್. ಟೆಂಪಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೃಪಾ ಅವರು ‘ಚಿತ್ರರೇಖಾ’ (ಪೆನ್ಸಿಲ್ ಸ್ಕೆಚ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪಂಜಿಕಲ್ಲು ಗ್ರಾಮದ ಕೆಲ್ಲೋಡಿ ನಿವಾಸಿ ಮಮತಾ ಮತ್ತು ರಾಮಕೃಷ್ಣ ದಂಪತಿಯ ಪುತ್ರಿಯಾಗಿರುವ ಕೃಪಾ
ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.










