ಕಂಬಳ ಕ್ಷೇತ್ರದ ಸಾಧಕ ವಿನ್ಸೆಂಟ್ ಪಿಂಟೋ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ

Coastal Bulletin
ಕಂಬಳ ಕ್ಷೇತ್ರದ ಸಾಧಕ ವಿನ್ಸೆಂಟ್ ಪಿಂಟೋ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ಬಂಟ್ವಾಳ: ಕಂಬಳ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಕ್ರೀಡೆಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಅಲ್ಲಿಪಾದೆ ಕೆಳಗಿನಮನೆಯ ಶ್ರೀ ವಿನ್ಸೆಂಟ್ ಪಿಂಟೋ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ–2026ಕ್ಕೆ ಆಯ್ಕೆಯಾಗಿದ್ದಾರೆ.

ಕಂಬಳದ ಬಗ್ಗೆ ಅಪಾರ ಪ್ರೀತಿ ಮತ್ತು ಅಭಿಮಾನ ಹೊಂದಿರುವ ವಿನ್ಸೆಂಟ್ ಪಿಂಟೋ ಅವರು ಕೋಣಗಳ ಮಾಲೀಕರಾಗಿ ಹಾಗೂ ಸ್ವತಃ ಓಟಗಾರರಾಗಿ ಕಂಬಳ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ 39 ವರ್ಷಗಳಿಂದ ಕಂಬಳದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಇವರು, ಕೋಣಗಳ ಮಾಲೀಕರಾಗಿ 90ಕ್ಕೂ ಅಧಿಕ ಪದಕಗಳನ್ನು ಹಾಗೂ ಓಟಗಾರರಾಗಿ 30ಕ್ಕೂ ಅಧಿಕ ಪದಕಗಳನ್ನು ಗಳಿಸಿದ್ದಾರೆ.

ಕಂಬಳದ ಕಣದಲ್ಲಿ ತಮ್ಮ ಪರಿಶ್ರಮ, ಅನುಭವ ಮತ್ತು

ಕ್ರೀಡಾ ಕೌಶಲ್ಯದ ಮೂಲಕ ಗಮನ ಸೆಳೆದಿರುವ ಇವರು, ಸಾಂಪ್ರದಾಯಿಕ ಕಂಬಳ ಕ್ರೀಡೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಕಂಬಳ ಕ್ಷೇತ್ರದಲ್ಲಿ ಸುದೀರ್ಘ ಕಾಲದ ಸೇವೆ, ಸಾಧನೆ ಹಾಗೂ ಸಮರ್ಪಣಾ ಮನೋಭಾವವನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕಂಬಳಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

39 ವರ್ಷಗಳ ಕಂಬಳ ಪಯಣಕ್ಕೆ ಸಂದ ಈ ಗೌರವಕ್ಕೆ ವಿನ್ಸೆಂಟ್ ಪಿಂಟೋ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ

Leave a Comment