9 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬಿಸಿನೆಸ್ ಜೆಟ್ ಪತನ: ವಿಮಾನದಲ್ಲಿದ್ದ ಎಲ್ಲರ ಸಾವು!

Coastal Bulletin
9 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬಿಸಿನೆಸ್ ಜೆಟ್ ಪತನ: ವಿಮಾನದಲ್ಲಿದ್ದ ಎಲ್ಲರ ಸಾವು!

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ಟೆಕ್ಸಾಸ್‌ನ ಆಸ್ಟಿನ್ - ಬರ್ಗ್‌ಸ್ಟ್ರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಬಹಾಮಾಸ್‌ನ ನಾರ್ತ್ ಎಲ್ಯೂಥೆರಾ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ಈ ವಿಮಾನವು, ಮಧ್ಯಾಹ್ನ 12:50ರ ಸುಮಾರಿಗೆ (ET ಸಮಯದ ಪ್ರಕಾರ) ಕ್ರೆಸ್ಟ್‌ಹೇವನ್ ಬಳಿ ಪತನಗೊಂಡಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಒಂಬತ್ತು ಮಂದಿಯೂ ಮೃತಪಟ್ಟಿದ್ದಾರೆ ಎಂದು ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ತಿಳಿಸಿದ್ದಾರೆ.

NTSB ನಡೆಸುತ್ತಿರುವ ತನಿಖೆಗೆ ನೆರವಾಗಲು FAA ತಂಡವೊಂದನ್ನು ಘಟನಾ ಸ್ಥಳಕ್ಕೆ ಕಳುಹಿಸುತ್ತಿದೆ ಎಂದು ಸೀನ್ ಡಫಿ ಸಾಮಾಜಿಕ ಜಾಲತಾಣವೊಂದರಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮಾತನಾಡಿ, ಅಪಘಾತದ ವೇಳೆ, ರಸ್ತೆಯಲ್ಲಿದ್ದವರು ಸಾವನ್ನಪ್ಪಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ.

ಇದು ಒಂದು ಭೀಕರ ವಿಮಾನ ಅಪಘಾತವಾಗಿದೆ ಎಂದು ಡಿಸಾಂಟಿಸ್ ಹೇಳಿದ್ದಾರೆ. ಅಪಘಾತ ಹೇಗಿತ್ತು ಎಂದು ಕ್ಷಿಪಣಿಯೊಂದು ಪತನವಾಗುತ್ತಿರುವಂತೆ ಕಾಣುತಿತ್ತು. ವಿಮಾನ ಕೆಳಕ್ಕೆ ಬಿದ್ದ ರಭಸಕ್ಕೆ ರಸ್ತೆಯ ಒಂದು ಬದಿಯಲ್ಲಿ ಭಾರಿ ಕುಳಿ ಬಿದ್ದಿದೆ ಎಂದು ಅವರು ವಿವರಿಸಿದ್ದಾರೆ.

ವಿಮಾನವು ಪತನಗೊಳ್ಳಲು ಕಾರಣವೇನು ಅಥವಾ ಅದರಲ್ಲಿ ಯಾರು ಇದ್ದರು ಎಂಬುದನ್ನು ಅಧಿಕಾರಿಗಳು ತಕ್ಷಣ ಯಾವುದೇ ಮಾಹಿತಿ ನೀಡಿಲ್ಲ. ವಿಮಾನವು 35,000 ಅಡಿ (ಸುಮಾರು 11 ಕಿಲೋಮೀಟರ್) ಎತ್ತರದಲ್ಲಿ ಪೂರ್ವಕ್ಕೆ ಸಾಗುತ್ತಿದ್ದಾಗ ಪೈಲಟ್‌ಗಳು ಪ್ರಕ್ಷುಬ್ಧತೆ,

ಹಿಮಪಾತ ಮತ್ತು ಮಳೆ ಆಗುತ್ತಿರುವುದನ್ನು ವರದಿ ಮಾಡಿದ್ದರು. ಅಷ್ಟೇ ಅಲ್ಲ ಇನ್ನೂ 2,000 ಅಡಿ (ಸುಮಾರು 610 ಮೀಟರ್) ಎತ್ತರಕ್ಕೆ ಏರಿಸಲು ವಿನಂತಿಸಿದ್ದರು ಎಂದು ವಾಯು ಸಂಚಾರ ನಿಯಂತ್ರಣ ರೆಕಾರ್ಡಿಂಗ್‌ಗಳು ಮತ್ತು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ತಿಳಿಸಿದೆ.

ವಿಮಾನದ ಪೈಲಟ್ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಸಹಾಯಕ್ಕಾಗಿ ಕರೆಗಳನ್ನು (distress calls) ಮಾಡಿದರು. ವಿಮಾನವು ನೆಲಕ್ಕೆ ಅಪ್ಪಳಿಸುವ ಮೊದಲು ಬಲಕ್ಕೆ ತೀವ್ರವಾಗಿ ಓರೆಯಾಗಿತ್ತು. ನಾವು 8,000 ಅಡಿಗಳಷ್ಟು ಕೆಳಗೆ ಇಳಿಯುತ್ತಿದ್ದೇವೆ. ಮೇ-ಡೇ, ಮೇ-ಡೇ (ತುರ್ತು ಕರೆ) ಎಂದು ಪೈಲಟ್ ರೇಡಿಯೋ ಮೂಲಕ ತಿಳಿಸಿದ್ದರು. ಪಾಮ್ ಬೀಚ್ ಕೌಂಟಿ ಶೆರಿಫ್ ಅಧಿಕಾರಿಗಳ ಪ್ರಕಾರ, ಈ ಅಪಘಾತವು ಫ್ಲೋರಿಡಾದ ಗ್ರೀನ್‌ಏಕರ್ಸ್‌ನಲ್ಲಿ ಸಂಭವಿಸಿದೆ. 45,000 ಜನಸಂಖ್ಯೆಯನ್ನು ಹೊಂದಿರುವ ಈ ನಗರವು ವೆಸ್ಟ್ ಪಾಮ್ ಬೀಚ್‌ನಿಂದ ನೈಋತ್ಯಕ್ಕೆ ಸುಮಾರು 7 ಮೈಲಿ (11 ಕಿಲೋಮೀಟರ್) ದೂರದಲ್ಲಿದೆ.

Leave a Comment