ನೆತ್ತರಕೆರೆ :ನವೋದಯ ಮಿತ್ರ ಕಲಾ ವೃಂದ (ರಿ) ಮತ್ತು ನೇತ್ರಾವತಿ ಮಾತೃ ಮಂಡಳಿ. 40ನೇ ವಾರ್ಷಿಕೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ದಿನೇಶ್ ಬೆರ್ವ, ಕಾರ್ಯದರ್ಶಿ ಶ್ರೀಧರ್ ಹೆಚ್ ಆಯ್ಕೆ.

Coastal Bulletin
ನೆತ್ತರಕೆರೆ :ನವೋದಯ ಮಿತ್ರ ಕಲಾ ವೃಂದ (ರಿ) ಮತ್ತು ನೇತ್ರಾವತಿ ಮಾತೃ ಮಂಡಳಿ. 40ನೇ ವಾರ್ಷಿಕೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ದಿನೇಶ್ ಬೆರ್ವ, ಕಾರ್ಯದರ್ಶಿ ಶ್ರೀಧರ್ ಹೆಚ್ ಆಯ್ಕೆ.

ಬಂಟ್ವಾಳ :ಪ್ರತಿಷ್ಠಿತ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾವೃಂದ (ರಿ.) ಹಾಗೂ ನೇತ್ರಾವತಿ ಮಾತೃ ಮಂಡಳಿ, ನೆತ್ತರಕೆರೆ ಇದರ 40ನೇ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ನ.1ರಂದು ಸಂಘದ ಸಭಾಂಗಣದಲ್ಲಿ ಜಂಟಿ ಸಭೆ ನಡೆಯಿತು.

ಸಭೆಯಲ್ಲಿ 40ನೇ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಕುರಿತು ಚರ್ಚಿಸಿ, ವಾರ್ಷಿಕೋತ್ಸವ ಸಮಿತಿಯನ್ನು ರಚಿಸಲಾಯಿತು.

ವಾರ್ಷಿಕೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ದಿನೇಶ್ ಬೆರ್ವ ಹಾಗೂ ಕಾರ್ಯದರ್ಶಿ ಶ್ರೀಧರ ಹೆಚ್ ಅವಿರೋಧವಾಗಿ ಆಯ್ಕೆಯಾದರು.

ಇತರ

ಪದಾಧಿಕಾರಿಗಳ ವಿವರ:

ಕೋಶಾಧಿಕಾರಿ ಶಶಾಂಕ್ ಎನ್. ಉಪಾಧ್ಯಕ್ಷರು ಸವಿತ್ ಎನ್. ಮತ್ತು ಸುನೀತಾ ಬೆರ್ವ, ಜೊತೆ ಕಾರ್ಯದರ್ಶಿ ಕುಮಾರಿ ವರ್ಷ

ಕ್ರೀಡಾ ಕಾರ್ಯದರ್ಶಿಗಳು ಧನ್ಯರಾಜ್ ಮತ್ತು ಕುಮಾರಿ ಜನನಿ ಆಯ್ಕೆಯಾದರು.


Leave a Comment