ಹ್ಯೊಗೆಬಜಾರ್: ಮೊಗವೀರ ಗ್ರಾಮಸಭಾ (ರಿ) ವಾರ್ಷಿಕ ಮಹಾಸಭೆ.

Coastal Bulletin
ಹ್ಯೊಗೆಬಜಾರ್: ಮೊಗವೀರ ಗ್ರಾಮಸಭಾ (ರಿ) ವಾರ್ಷಿಕ ಮಹಾಸಭೆ.

ಮಂಗಳೂರು :ಹ್ಯೊಗೆಬಜಾರ್ ಮೊಗವೀರ ಗ್ರಾಮಸಭಾ (ರಿ) "ವಾರ್ಷಿಕ ಮಹಾಸಭೆ ಜುಲೈ 12 ರಂದು ನೆರವೇರಿತು.ವಾರ್ಷಿಕ ವರದಿ, ಲೆಕ್ಕಪತ್ರ ಪರಿಶೀಲನೆ ಹಾಗು ಅಂಗೀಕಾರ, ಗ್ರಾಮಾಭಿವೃದ್ದಿ ಹಾಗು ಸುಮಾರು 40 ಲಕ್ಷ ವೆಚ್ಚದಲ್ಲಿ ಗ್ರಾಮಸಭೆಯ ನೂತನ ಸಭಾಭವನದ  ಬಗ್ಗೆ ಚರ್ಚೆ ನಡೆಯಿತು.

ಇದೇ ವೇಳೆ ಗ್ರಾಮದ sslc, puc, degree ಪರೀಕ್ಷೆಯಲ್ಲಿ 80% ಗಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗು ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಗೌರವ ಧನ ಹಾಗು

ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಅಧ್ಯಕ್ಷರಾದ ಹೇಮಂತ ಕುಮಾರ, ಕಿಶನ್ ಕೋಟ್ಯಾನ್,ಕವಿತಾ ವಾಸು,ಅನಿಲ್ ಹ್ಯೊಗೆಬಜಾರ್, ಸುದರ್ಶನ  ಸಂಧ್ಯಾ ಹ್ಯೊಗೆಬಜಾರ್ ಕಮಿಟಿಯ ಇತರ ಸದಸ್ಯರು, ಗ್ರಾಮದ ಹಿರಿಯ ಮುಖಂಡರುಗಳು ಹಾಗು ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

Leave a Comment