Coastal Bulletin

ಮೇಷ ಉನ್ನತ ಅಧಿಕಾರಿಗಳ ಅನುಗ್ರಹದಿಂದಾಗಿ ವೃತ್ತಿಯಲ್ಲಿ ಸಾಕಷ್ಟು ಅನುಕೂಲ ಒದಗುತ್ತದೆ. ಅನಿರೀಕ್ಷಿತ ಧನಾಗಮನದಿಂದ ನಿಮಗೆ ಅಚ್ಚರಿಯಾಗಬಹುದು. ಹಣದ ಹರಿವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಸವಲತ್ತುಗಳು ದೊರೆಯುವುದರ ಜೊತೆಗೆ ಉತ್ತಮ ಫಲಿತಾಂಶ ಸಿಗುವ ಯೋಗವಿದೆ.

ವೃಷಭ

ನೌಕರರು ಮಾಡುವ ತಪ್ಪಿಗೆ ಹಿರಿಯ ಅಧಿಕಾರಿಗಳು ಮುಜುಗರ ಪಡುವ ಸಂದರ್ಭವಿದೆ. ನಿಂತುಹೋಗಿರುವ ನಿಮ್ಮ ಕೆಲವು ಯೋಜನೆಗಳು ಪುನಃ ಚಾಲನೆ ಪಡೆಯುತ್ತವೆ. ಕೆಲವರಿಗೆ ಜನರಿಂದ ಪುರಸ್ಕಾರ ಪಡೆಯುವ ಯೋಗವಿದೆ. ಪ್ರಾಪ್ತ ವಯಸ್ಕರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಮಹಿಳೆಯರಿಗೆ ಆಭರಣ ಕೊಳ್ಳುವ ಯೋಗವಿದೆ.

ಮಿಥುನ

ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಇವೆ. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಕಾಣುತ್ತಿದೆ. ಗೃಹ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ಬರುವ ಸಾಧ್ಯತೆ ಇದೆ. ನವೀನ ರೀತಿಯ ವಸ್ತ್ರವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಾಗುತ್ತದೆ. 

ಕಟಕ

ನಿಮ್ಮ ಒಳ್ಳೆಯತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವರು. ಈ ಬಗ್ಗೆ ಎಚ್ಚರವಹಿಸಿರಿ. ನಿಮ್ಮ ನಿರೀಕ್ಷೆಯಷ್ಟು ಹಣದ ಒಳಹರಿವು ಇರುತ್ತದೆ. ಈ ಹಿಂದೆ ಬಂದಿದ್ದ ಅಪವಾದದಿಂದ ಪಾರಾಗುವಿರಿ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸಾಕಷ್ಟು ಯಶಸ್ಸನ್ನು ಕಾಣಬಹುದು. ಅನವಶ್ಯಕ ವ್ಯವಹಾರಗಳಿಂದ ಮುಕ್ತಿಯನ್ನು ಹೊಂದುವಿರಿ. 

ಸಿಂಹ

ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿರುವವರಿಗೆ ಅಪೇಕ್ಷಿಸುತ್ತಿದ್ದ ಸೌಕರ್ಯಗಳು ಈಗ ದೊರೆಯುತ್ತದೆ. ಮಧ್ಯವರ್ತಿಗಳನ್ನು ಕೈಬಿಟ್ಟು ನೀವೇ ನೇರವಾಗಿ ಅಧಿಕಾರಿಗಳನ್ನು ಭೇಟಿಯಾದಲ್ಲಿ ನಿಮ್ಮ ಕೆಲಸಗಳು ಆಗುತ್ತದೆ. ಸಣ್ಣಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಲೇಬೇಕಾಗುತ್ತದೆ. ಸಗಟು ವಸ್ತ್ರಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿ ಆಗುತ್ತದೆ. 

ಕನ್ಯಾ

ರಕ್ತಸಂಬಂಧಿಗಳ ಸಹಾಯದಿಂದ ಕೆಲವು ಆರ್ಥಿಕ ಮುಗ್ಗಟ್ಟುಗಳನ್ನು ಪರಿಹಾರ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಅತಿಯಾದ ಒತ್ತಡಗಳನ್ನು ಎದುರಿಸಬೇಕಾಗಬಹುದು. ತಾಳ್ಮೆಯಿಂದ ಇದ್ದಲ್ಲಿ ನಿಮಗೆ ಅನುಕೂಲವಾಗುತ್ತದೆ. ಯಾರ ಮೇಲೆಯೂ ಅತಿಯಾದ ನಂಬಿಕೆ ಇಡುವುದು ಒಳಿತಲ್ಲ. ಮಕ್ಕಳ ಪ್ರಗತಿಗಾಗಿ ಸಾಕಷ್ಟು ಶ್ರಮವಹಿಸುವಿರಿ. 

ತುಲಾ

ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ದೊರೆಯುತ್ತದೆ. ಕಳೆದುಕೊಂಡಿದ್ದ

ಗೌರವ ಸ್ಥಾನ ಪುನಃ ದೊರೆಯುತ್ತವೆ. ನ್ಯಾಯಾಲಯದಲ್ಲಿನ ತೀರ್ಪು ನಿಧಾನವಾಗುವ ಸಾಧ್ಯತೆಗಳಿವೆ. ಮಹಿಳೆಯರಿಗೆ ರಾಜಕೀಯ ಪಕ್ಷಗಳಲ್ಲಿ ಯಶಸ್ಸು ದೊರೆಯುತ್ತದೆ. ಆರ್ಥಿಕ ಸ್ಥಿತಿಯು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಸಾಹಿತಿಗಳಿಗೆ ಮತ್ತು ಬರಹಗಾರರಿಗೆ ಶುಭಸಂದೇಶ ಬರುತ್ತದೆ.

ವೃಶ್ಚಿಕ

ಬಹುದಿನಗಳ ನಂತರ ಸಂಗಾತಿಯೊಡನೆ ವಿಹಾರಕ್ಕಾಗಿ ಹೋಗಿಬರುವ ಸಾಧ್ಯತೆಗಳಿವೆ. ಹಣದ ಒಳಹರಿವು ತೃಪ್ತಿದಾಯಕವಾಗಿ ಇರುತ್ತದೆ. ಹಿರಿಯ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಸರಿಯಾಗಿ ನಡೆದುಕೊಳ್ಳುವುದು ಬಹಳ ಉತ್ತಮ. ಸಾಮಾಜಿಕ ಕಾರ್ಯಗಳನ್ನು ಮಾಡುವ ಮಹಿಳೆಯರಿಗೆ ಗೌರವ ದೊರೆಯುತ್ತದೆ. 

ಧನು

ನಿಮಗೆ ಎದುರಾಗುವ ಸಮಸ್ಯೆಗಳನ್ನು ಸಮಾಧಾನವಾಗಿ ಸ್ವೀಕರಿಸಿರಿ. ಸೌಂದರ್ಯವರ್ಧಕಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ಮಾರಾಟವಾಗುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಗಂಭೀರವಾಗಿ ಚಿಂತನೆ ಮಾಡುವ ಕಾಲ. ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಹೆಚ್ಚು ಸಂಪಾದನೆಯಾಗುತ್ತದೆ. 

ಮಕರ

ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚು ಯಶಸ್ಸನ್ನು ಕಾಣಬಹುದು. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ ಹಾಗೂ ಉತ್ತಮ ಗೌರವ ದೊರೆಯುತ್ತದೆ. ಕುಟುಂಬದ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ರಾಜಕೀಯ ನಾಯಕರಿಗೆ ಹಿರಿಯ ನಾಯಕರೊಡನೆ ಉತ್ತಮ ಸಂಪರ್ಕ ದೊರೆಯುತ್ತದೆ. 

ಕುಂಭ

ಸಮಾಜದ ಒಳಿತಿಗಾಗಿ ನೀವು ಮಾಡಿದ ಕೆಲಸಗಳು ಸಾಕಷ್ಟು ಫಲವನ್ನು ಕೊಡುತ್ತವೆ. ನಿವೇಶನ ಅಥವಾ ಸ್ಥಿರಾಸ್ತಿಯನ್ನು ಖರೀದಿ ಮಾಡುವ ಯೋಗವಿದೆ. ದಿನನಿತ್ಯದ ವ್ಯವಹಾರಗಳು ಎಂದಿನಂತೆ ನಡೆಯಲಿವೆ. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಯಶಸ್ಸು ಇರುತ್ತದೆ.

ಮೀನ

ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಒಡಹುಟ್ಟಿದವರಿಂದ ನಿಮ್ಮ ಅಪೇಕ್ಷೆಯ ಸಹಾಯಗಳು ದೊರೆಯುತ್ತವೆ. ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ ದೊರಕುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರವನ್ನು ಮಾಡುವವರಿಗೆ ನಿರೀಕ್ಷಿತ ಆದಾಯ ಬರುತ್ತದೆ. 

Leave a Comment