Coastal Bulletin

ಮೇಷ ಸಂಪನ್ಮೂಲಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸುವಿರಿ. ಇತರರ ಕೆಲಸಗಳ ಯಶಸ್ಸಿಗಾಗಿ ಸಲಹೆ ನೀಡುವ ಅವಕಾಶ ದೊರೆಯುತ್ತದೆ. ಈ ಹಿಂದೆ ನಿಲ್ಲಿಸಿದ್ದ ವಿದ್ಯಾಭ್ಯಾಸವನ್ನು ಪುನಃ ಆರಂಭಿಸಲು ಸೂಕ್ತ ಆಲೋಚನೆ ಮಾಡುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುವುದಿಲ್ಲ.

ವೃಷಭ

ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವವರಿಗೆ ಮಾನ್ಯತೆ ಮತ್ತು ಗೌರವ ದೊರೆಯುತ್ತದೆ. ಹಣಕಾಸಿನ ಸ್ಥಿತಿಯು ಸ್ವಲ್ಪಮಟ್ಟಿಗೆ ಉತ್ತಮಗೊಳ್ಳುವುದು. ತಾಯಿಯ ಹಿತನುಡಿಗಳು ನಿಮಗೆ ಒಳಿತನ್ನು ಮಾಡುತ್ತವೆ. ವಿನಾಕಾರಣವಾದ ವಿವಾದಗಳನ್ನು ಯಾರೊಂದಿಗೂ ಮಾಡದಿರಿ

ಮಿಥುನ

ವೈಯಕ್ತಿಕ ವ್ಯವಹಾರದ ಹೋರಾಟದಲ್ಲಿ ಪ್ರಗತಿ ಕಾಣುವಿರಿ. ಮನೆಯವರ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತಿ ಅಗತ್ಯ. ಕೆಲವರಿಗೆ ಅಧ್ಯಯನದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದ ಸಂದರ್ಭವಿರುತ್ತದೆ. ಆರ್ಥಿಕ ಸಬಲತೆಗಾಗಿ ಹೊಸ ಹೊಸ ದಾರಿಗಳನ್ನು ಹುಡುಕುವಿರಿ. 

ಕಟಕ

ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಇತರರ ಅಭಿವೃದ್ಧಿಯ ಬಗ್ಗೆ ಚಿಂತೆ ಮಾಡದೆ ನಿಮ್ಮ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿರಿ. ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ದೊರೆಯಬಹುದು. ಹಣದ ಒಳಹರಿವು ಸಾಮಾನ್ಯವಾಗಿದ್ದು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ.

ಸಿಂಹ

ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆಗಳಿವೆ. ಹಣಕಾಸಿನ ಅನುಕೂಲ ತಕ್ಕಮಟ್ಟಿಗೆ ಹೆಚ್ಚಾಗುತ್ತದೆ. ನಿಮ್ಮ ಸಮಾಜದ ಪ್ರಮುಖರೊಂದಿಗೆ ಬಾಂಧವ್ಯ ವೃದ್ಧಿಸುತ್ತದೆ. ವಾಹನ ಚಾಲನೆ ಮಾಡುವಾಗ ಸ್ವಲ್ಪ ಎಚ್ಚರವಾಗಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ತಿರುವು ಬಂದು ನಿಮಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ಬರುತ್ತದೆ.

ಕನ್ಯಾ

ಧೃಡ ಸಂಕಲ್ಪದಿಂದ ಮಾಡಿದ ಕೆಲಸಗಳು ಪೂರ್ಣಗೊಳ್ಳುವವು. ಕೃಷಿ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಮೂಡಿ ಅದರಲ್ಲಿ ತೊಡಗಿಕೊಳ್ಳುವಿರಿ. ನೃತ್ಯ ಕಲಾವಿದರುಗಳಿಗೆ ಹೆಚ್ಚಿನ ಕೆಲಸಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಹಿರಿಯರ ಬಗ್ಗೆ ಗೌರವವನ್ನು ತೋರುವುದು ಒಳ್ಳೆಯದು. ಅನವಶ್ಯಕವಾಗಿ ಇತರರನ್ನು ಹೀಗಳೆಯುವುದು ನಿಮಗೆ ನಷ್ಟಕೊಡುವುದು. 

ತುಲಾ

ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಹುದು. ರಾಜಕಾರಣಕ್ಕೆ ಸೇರಬೇಕೆನ್ನುವವರು ತಮ್ಮ ಸ್ಥಾನಮಾನಗಳ ಬಗ್ಗೆ ಸರಿಯಾಗಿ ತಿಳಿಯುವುದು ಉತ್ತಮ. ಗೃಹ ನಿರ್ಮಾಣ ಮಾಡುವವರಿಗೆ ಉತ್ತಮ ಸಹಕಾರ ದೊರೆಯುತ್ತದೆ.

ಹೂಡಿಕೆ ವ್ಯವಹಾರಗಳಿಂದ ಹೆಚ್ಚಿನ ಹಣ ಬರುತ್ತದೆ.

ವೃಶ್ಚಿಕ

ವಿದ್ಯುತ್ ಉಪಕರಣಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಬಗೆಹರಿಯಬೇಕಿದ್ದ ವ್ಯಾಜ್ಯಗಳು ಸ್ವಲ್ಪ ಕಾಲ ವಿಳಂಬವಾಗುತ್ತದೆ. ನಯವಂಚಕರಿಂದ ನಿಮ್ಮ ಹಣ ಸಾಕಷ್ಟು ಪೋಲು ಆಗಬಹುದು, ಸ್ವಲ್ಪ ಎಚ್ಚರವಾಗಿರಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿಯನ್ನು ಕಂಡರೂ ಸಾಮಾಜಿಕ ಜೀವನದಲ್ಲಿ ಕಳಂಕ ಬರುವ ಸಾಧ್ಯತೆ ಇದೆ. ಸಂದೇಹಾಸ್ಪದ ವ್ಯಕ್ತಿಗಳಿಂದ ದೂರವಿರುವುದು ಬಹಳ ಒಳ್ಳೆಯದು.

ಧನು

ಬಹಳ ದಿನಗಳಿಂದ ಅನಾರೋಗ್ಯ ಪೀಡಿತರಾದ ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಹೊಸ ವಾಹನದ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ದಿನಸಿ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಿ ಸಹಕಾರ ನೀಡುವ ನಿಮ್ಮ ಮನೋಭಾವಕ್ಕೆ ಗೌರವ ದೊರೆಯುತ್ತದೆ.

ಮಕರ

ಆದಾಯದಲ್ಲಿ ಸಮತೋಲನ ಕಂಡು ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಸ್ವಯಂ ಉದ್ಯೋಗ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಊಟ ತಿಂಡಿಗಳನ್ನು ಅಲ್ಪಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. 

ಕುಂಭ

ಹಣಕಾಸಿನ ಅನುಕೂಲದಲ್ಲಿ ತುಸು ಏರಿಕೆಯನ್ನು ಕಾಣಬಹುದು. ಹಿರಿಯರಿಗೆ ಕೆಲವೊಂದು ಸಂಸ್ಥೆಗಳ ನಾಯಕತ್ವವನ್ನು ವಹಿಸುವ ಅವಕಾಶ ದೊರೆಯುತ್ತದೆ. ಶೃಂಗಾರ ಸಾಧನಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗುತ್ತದೆ. ಸ್ಥಿರಾಸ್ತಿ ಖರೀದಿ ಮಾಡುವ ಆಲೋಚನೆ ಸದ್ಯಕ್ಕೆ ಬೇಡ. ಯುವಕರ ಅತಿಯಾದ ಆತ್ಮವಿಶ್ವಾಸವು ಅವರನ್ನು ನಗೆಪಾಟಲಿಗೆ ದೂಡುವ ಸಾಧ್ಯತೆ ಇದೆ.

ಮೀನ

ಎದುರಾಳಿಗಳ ಕಾರ್ಯತಂತ್ರಗಳು ವಿಫಲವಾಗಿ ನಿಮಗೆ ಜಯ ದೊರೆಯುತ್ತದೆ. ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅವರ ವಿಷಯದ ಆಯ್ಕೆಯ ಬಗ್ಗೆ ಗೊಂದಲಗಳು ಉಂಟಾಗುತ್ತವೆ. ಸಂಗಾತಿಯ ಸಹಕಾರದಿಂದ ಸ್ವಯಂ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಸಾಧಿಸುವಿರಿ. ಕಟ್ಟಡ ಕಟ್ಟುವ ಕಾರ್ಮಿಕರಿಗೆ ಹೆಚ್ಚಿನ ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ.

Leave a Comment