ತಾರತಮ್ಯವಿಲ್ಲದೇ ಅರೋಗ್ಯಪೂರ್ಣ ಸೇವೆಯಿಂದ ವೈದ್ಯರ ಬದುಕು ಸಾರ್ಥಕ :ರೋ ಡಾ.ಸುದೀಪ್ ಕುಮಾರ್

Coastal Bulletin
ತಾರತಮ್ಯವಿಲ್ಲದೇ ಅರೋಗ್ಯಪೂರ್ಣ ಸೇವೆಯಿಂದ ವೈದ್ಯರ ಬದುಕು ಸಾರ್ಥಕ :ರೋ ಡಾ.ಸುದೀಪ್ ಕುಮಾರ್

ಬಂಟ್ವಾಳ :ಯಾವುದೇ ಬೇಧ ಭಾವವಿಲ್ಲದೆ ಸಮಾಜದ ಪ್ರತಿಯೊಬ್ಬರಿಗೂ ಅವರವರ ಅರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಿ ಅರೋಗ್ಯಪೂರ್ಣ ಸೇವೆ ಸಲ್ಲಿಸುವುದರೊಂದಿಗೆ ವೈದ್ಯರು ತಮ್ಮ ಬದುಕಿನಲ್ಲಿ ಸಾರ್ಥಕತೆ ಕಾಣುತ್ತಿರುವುದು ವೈದ್ಯ ವೃತ್ತಿಯಿಂದ ಸಾಧ್ಯವಾಗಿದೆ ಎಂದೂ ರೋ ಡಾ ಸುದೀಪ್ ಕುಮಾರ್ ಅಭಿಪ್ರಾಯ ಪಟ್ಟರು.

ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತವಾಗಿ ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಬಂಟ್ವಾಳ ವತಿಯಿಂದ  ನೀಡಿದ ಗೌರವರ್ಪಣೆ ಸ್ವೀಕರಿಸಿ

ಸಿದ್ದಕಟ್ಟೆ ಅನಂತ ಪದ್ಮಾಂಭ ಹೆಲ್ತ್ ಸೆಂಟರ್ ನ ಡಾ ಸುದೀಪ್ ಕುಮಾರ್ ತಮ್ಮ  ಅಭಿಪ್ರಾಯ ವ್ಯಕ್ತಪಡಿಸಿದರು.ರೋಟರಿ ಕ್ಲಬ್ ಮೂಲಕ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೋಟರಿ ಜಿಲ್ಲೆಯಲ್ಲಿಯೇ ಮಾದರಿ ಕ್ಲಬ್ ಆಗಿ ಮೂಡಿ ಬರಲಿ ಎಂದೂ ಶುಭಹಾರೈಸಿದರು.

ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್

ಅಧ್ಯಕ್ಷರಾದ ರೋ ಗೀತಾ ಬಲ್ಲಾಳ್ ಗೌರವರ್ಪಣೆ ಮಾಡಿ ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತ  ವೈದ್ಯರನ್ನು ಗೌರವಿಸುವುದರಿಂದ ತುಂಬಾ ಸಂತೋಷವಾಗಿದೆ. ಈ ನಿಟ್ಟಿನಲ್ಲಿ ವೈದ್ಯರ ಸೇವೆಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ರಾಜೇಶ್ ಶೆಟ್ಟಿ ರಾಯಿ ಶೀತಲಾ, ಸುಮಿತ್ರಾ ರಾಮಚಂದ್ರ ಶೆಟ್ಟಿಗಾರ್, ಪ್ರಭಾಕರ ಪ್ರಭು, ರಾಜೇಶ್ ಶೆಟ್ಟಿ ಕೊನೆರಬೆಟ್ಟು ಉಪಸ್ಥಿತರಿದ್ದರು. ರೋ ರಮೇಶ್ ನಾಯಕ್ ರಾಯಿ ಸ್ವಾಗತಿಸಿ ಧನ್ಯವಾದವಿತ್ತರು

Leave a Comment