"ಫರಂಗಿಪೇಟೆ ಗಣೇಶೋತ್ಸವ" ಸಂಪನ್ನ ಒಗ್ಗಟ್ಟಿನಿಂದ ಮಾಡುವ ಪೂಜೆಯಲ್ಲಿ ಅಪಾರ ಶಕ್ತಿ: ಸ್ವಾಮಿ ಜೀತಾಕಾಮನಂದಾಜೀ.

Coastal Bulletin
"ಫರಂಗಿಪೇಟೆ ಗಣೇಶೋತ್ಸವ" ಸಂಪನ್ನ ಒಗ್ಗಟ್ಟಿನಿಂದ ಮಾಡುವ ಪೂಜೆಯಲ್ಲಿ ಅಪಾರ ಶಕ್ತಿ: ಸ್ವಾಮಿ ಜೀತಾಕಾಮನಂದಾಜೀ.

ಬಂಟ್ವಾಳ :ಒಗ್ಗಟ್ಟಿನಿಂದ ಮಾಡುವ ಪೂಜೆಗೆ ವಿಶೇಷ ಶಕ್ತಿಯಿದೆ, ಭಕ್ತಿಯೊಂದಿಗೆ ಒಂದಾಗಿ ನಿಂತಾಗ ದೇವರ ಕೃಪೆಯೂ, ಮನಸ್ಸಿನ ನೆಮ್ಮದಿಯೂ ದೊರೆಯುತ್ತದೆ,ನಾವು ಮಾಡುವ ಎಲ್ಲಾ ಧಾರ್ಮಿಕ ಕಾರ್ಯಗಳ ಹಿಂದೆ ಶ್ರದ್ದೆ ಇದ್ದರೆ ಭಗವಂತನ ಅನುಗ್ರಹ ದೊರೆಯುತ್ತದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜೀತಾಕಾಮನಂದಾಜೀ ಹೇಳಿದರು.


ಅವರು ಹಿಂದೂ ಧಾರ್ಮಿಕ ಸೇವಾ ಸಮಿತಿ ಫರಂಗಿಪೇಟೆ ಇದರ ಅಶ್ರಯದಲ್ಲಿ ಸೇವಾಂಜಲಿ ಸಭಾಗೃಹದಲ್ಲಿ 3ದಿನಗಳ ಕಾಲ ವಿಜೃಂಭಣೆಯಿಂದ ನಡೆದ 44ನೇ ವರ್ಷದ "ಫರಂಗಿಪೇಟೆ ಗಣೇಶೋತ್ಸವ" ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಈ ಸಂದರ್ಭದಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ವಿತರಿಸಲಾಯಿತು ಹಾಗೂ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು

ಕಾರ್ಯಕ್ರಮದಲ್ಲಿ ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಪುರುಷ ಸಾಲ್ಯಾನ್, ಮೇರಮಜಲು ಗ್ರಾ ಪಂ ಮಾಜಿ ಅಧ್ಯಕ್ಷೆ ರತ್ನ

ಪೂಜಾರಿ,ಸಾಮಾಜಿಕ ಕಾರ್ಯಕರ್ತ ಸಂತೋಷ್ ತುಪ್ಪೆಕಲ್ಲು,ಉಪಸ್ಥಿತರಿದ್ದರು

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ,ಫರಂಗಿಪೇಟೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷೆ ಕವಿತಾ ದೇವದಾಸ್ ಅರ್ಕುಳ ಧನ್ಯವಾದವಿತ್ತು, ದೇವದಾಸ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಗಣಪತಿ ದೇವರಿಗೆ ಮಹಾಪೂಜೆ ನಡೆದು ದೇವರ ಭವ್ಯ ಶೋಭಯಾತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡೆಗೋಳಿ ತನಕ ಸಾಗಿ ಅಲ್ಲಿಂದ ಅದೇ ದಾರಿಯಲ್ಲಿ ಸಾಗಿ ಅರ್ಕುಳ ನೇತ್ರಾವತಿ ನದಿಯಲ್ಲಿ ವಿಸರ್ಜಿಸಲಾಯಿತು.ಮೆರವಣಿಗೆಯಲ್ಲಿ ಭಜನೆ, ಶಂಖ, ಜಾಗಟೆ, ಬ್ಯಾಂಡ್, ಚೆಂಡೆ, ಕೊಂಬು ಕೀಳು ಕುದುರೆ, ಡೊಳ್ಳು ಕುಣಿತ, ಆಕರ್ಷಕ ಟ್ಯಾಬ್ಲೋಗಳು ಸಹಿತ ಅಪಾರ ಭಗವಾದ್ಭಕ್ತರು ಕಣ್ತುಂಬಿಕೊಂಡರು.

ಫೋಟೋ ವರದಿ : :ಸಂತೋಷ್ ಕುಲಾಲ್ ನೆತ್ತರಕೆರೆ 

Leave a Comment