ಹಿರ್ಗಾನ: ವಿದ್ಯಾರ್ಥಿಗಳ ಕ್ರೀಡಾ ಕೌಶಲಕ್ಕೆ ವೇದಿಕೆಯಾದ ಖೋ-ಖೋ ಪಂದ್ಯಾಟ

Coastal Bulletin
ಹಿರ್ಗಾನ: ವಿದ್ಯಾರ್ಥಿಗಳ ಕ್ರೀಡಾ ಕೌಶಲಕ್ಕೆ ವೇದಿಕೆಯಾದ ಖೋ-ಖೋ ಪಂದ್ಯಾಟ

ಹಿರ್ಗಾನ: ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಹಿರ್ಗಾನ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ 17ರ ವಯೋಮಾನದ ಬಾಲಕ/ಬಾಲಕಿಯರ ಖೋ-ಖೋ ಪಂದ್ಯಾಟದ ಉದ್ಘಾಟನಾ ಸಮಾರಂಭವು ಸೆ.09ರಂದು ಯಶಸ್ವಿಯಾಗಿ ನಡೆಯಿತು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರಾದ ಶ್ರೀ ಶಂಕರ್ ನಾಯಕ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಉದ್ಯಮಿ, ಕೊಡುಗೈ ದಾನಿಗಳಾದ ಶ್ರೀಯುತ ಸಿರಿಯಣ್ಣ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀಮತಿ ಕೆ.ಪಿ. ಪದ್ಮಾವತಿಯವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಸಮಾರೋಪ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಡಾ. ಸಂತೋಷ್ ಪೂಜಾರಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಕಟ್ಟಡ ಮಾಜಿ ಉಪಾಧ್ಯಕ್ಷರು ಗ್ರಾ.ಪಂ. ಹಿರ್ಗಾನ, ಶ್ರೀ ಪ್ರಶಾಂತ್ ಕಾನಂಗಿ - ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶ್ರೀ ಹರಿಶ್ಚಂದ್ರ

ಆಚಾರ್ಯ - ಕಾರ್ಯದರ್ಶಿ, ಉದ್ಯಮಿಗಳಾದ ಶ್ರೀ ಚೇತನ್ ಶೆಟ್ಟಿ, ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀ ಹರಿಶ್ಚಂದ್ರ ಕುಲಾಲ್, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ರಾಜಾರಾಮ್ ಶೆಟ್ಟಿ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ವಸಂತ, ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಶ್ರೀಮತಿ ಗ್ರೆಟ್ಟಾ ಮರಿನಾ ಸಾಲಿಸ್ ಸ್ವಾಗತಿಸಿದರು. ಪ್ರೌಢ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು. ಭೌತ ವಿಜ್ಞಾನ ಶಿಕ್ಷಕರಾದ ಜಾನ್ ಗೊಲ್ಬರ್ಟ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

Leave a Comment