ಬಿ. ಸಿ. ರೋಡು :  ಬಿ.ರಮಾನಾಥ ರೈ 75ನೇ ಹುಟ್ಟುಹಬ್ಬ ಸರಣಿ ಕಾರ್ಯಕ್ರಮಕ್ಕೆ ಚಾಲನೆ. ರೈ ಕರಾವಳಿ ರಾಜಕಾರಣದ ಭೀಷ್ಮ :ಪ್ರೊ. ಕೆ. ತುಕಾರಾಮ ಪೂಜಾರಿ

Coastal Bulletin
ಬಿ. ಸಿ. ರೋಡು :  ಬಿ.ರಮಾನಾಥ ರೈ 75ನೇ ಹುಟ್ಟುಹಬ್ಬ ಸರಣಿ ಕಾರ್ಯಕ್ರಮಕ್ಕೆ ಚಾಲನೆ. ರೈ ಕರಾವಳಿ ರಾಜಕಾರಣದ ಭೀಷ್ಮ :ಪ್ರೊ. ಕೆ. ತುಕಾರಾಮ ಪೂಜಾರಿ

ಬಂಟ್ವಾಳ: ಜಿಲ್ಲೆಯಲ್ಲಿ ಪೆರ್ನೆ ಸಮೀಪದ ಪ್ರತಿಷ್ಟಿತ ಬೆಳ್ಳಿಪಾಡಿ ಬಂಟರ ಮನೆತನದಲ್ಲಿ ಜನಿಸಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಅವರಂತಹ ಹಲವಾರು ಮಂದಿ ಮಂಗಳೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಓದಿದ ಬಳಿಕ ನಾಯಕತ್ವ ಗುಣದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ ರಾಜಕೀಯ ಕ್ಷೇತ್ರದಲ್ಲಿ ಅವರು ಕರಾವಳಿ ರಾಜಕಾರಣದ ಭೀಷ್ಮ ಎಂದು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ. ಕೆ. ತುಕಾರಾಮ ಪೂಜಾರಿ ಹೇಳಿದ್ದಾರೆ.

ಇಲ್ಲಿನ ಬಿ. ಸಿ. ರೋಡು ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ನಡೆದ   ಮಾಜಿ ಸಚಿವ ಬಿ. ರಮಾನಾಥ ರೈ ಇವರ 75ನೇ ವರ್ಷದ ಹುಟ್ಟುಹಬ್ಬದ ಸರಣಿ ಕಾರ್ಯಕ್ರಮಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

ಬಡ ಜನತೆ ಮತ್ತು ಹಿಂದುಳಿದ ವರ್ಗ ಸಹಿತ ಎಲ್ಲರೊಂದಿಗೂ ಬೆರೆತು ಎಲ್ಲಾ ಕ್ಷೇತ್ರದಲ್ಲಿ ಸಮಾಜ ಸೇವೆ ಸಲ್ಲಿಸಿದ ಶ್ರೇಷ್ಠ ರಾಜಕಾರಣಿ ಯಾಗಿ ಜಿಲ್ಲೆಯ' ದೇವರಾಜ ಅರಸು ' ಎನಿಸಿಕೊಂಡಿದ್ದಾರೆ ಎಂದು ಅವರು ಶ್ಲಾಘಿಸಿದರು.

ಹುಟ್ಟು ಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್.ಗಟ್ಟಿ, ಪ್ರಮುಖರಾದ ಶಾಲೆಟ್ ಪಿಂಟೋ, ಲಾವಣ್ಯ ಬಲ್ಲಾಳ್, ಎಂ.ಎಸ್.ಮಹಮ್ಮದ್,

ಅಶ್ವನಿ ಕುಮಾರ್ ರೈ, ಮಲ್ಲಿಕಾ ಪಕ್ಕಳ, ಬಿ. ಪದ್ಮಶೇಖರ ಜೈನ್ , ಮುಸ್ತಾಫ ಸುಳ್ಯ,  ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್,  ಶಾಹುಲ್ ಹಮೀದ್, ಅಬ್ಬಾಸ್ ಆಲಿ , ಸುದರ್ಶನ್ ಜೈನ್, ಇಬ್ರಾಹಿಂ ನವಾಜ್ ಬಡಕಬೈಲು, ಶಶಿಧರ್ ಹೆಗ್ಡೆ, ಧರಣೇಂದ್ರ ಕುಮಾರ್, ಕೆ. ಪದ್ಮನಾಭ ರೈ, ಕೆ. ಸಂಜೀವ ಪೂಜಾರಿ ಮೆಲ್ಕಾರ್, ಉಮೇಶ್ ಬೋಳಂತೂರು,  ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಐಡಾ ಸುರೇಶ್, ಲವೀನಾ ವಿಲ್ಮಾ ಮೊರಾಸ್, ಶೈಲಜಾ ರಾಜೇಶ್ ಮತ್ತಿತರರು ಇದ್ದರು.

ಇದೇ ವೇಳೆ 75ರ ಸಂಭ್ರಮದ ಲಾಂಛನ ಬಿಡುಗಡೆ ಗೊಳಿಸಲಾಯಿತು. ಸಮಿತಿ ಸಂಚಾಲಕ ಪಿಯೂಸ್ ಎಲ್.ರೋಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಬೇಬಿ ಕುಂದರ್ ವಂದಿಸಿದರು. ಬಾಲಕೃಷ್ಣ ‌ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು

Leave a Comment