ಬಂಟ್ವಾಳ :ಹಿಂದೂ ಧಾರ್ಮಿಕ ಸೇವಾ ಸಮಿತಿ ಫರಂಗಿಪೇಟೆ ಇದರ ಅಶ್ರಯದಲ್ಲಿ 44ನೇ ವರ್ಷದ "ಫರಂಗಿಪೇಟೆ ಗಣೇಶೋತ್ಸವ"ವು ಸೆ. 14 ರಿಂದ 16ರವರೆಗೆ ವಿಜೃಂಭಣೆಯಿಂದ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.
ಸೆ. 14ರಂದು ಬೆಳಿಗ್ಗೆ 7.10ಕ್ಕೆ ಶ್ರೀ ಮಹಾಗಣಪತಿಯ ಪ್ರತಿಷ್ಠಾಪನೆ ಗೊಂಡು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಧ್ವಜಾರೋಹಣ ವನ್ನು ನೆರೆವೇರಿಸಲಿದ್ದಾರೆ ಬಳಿಕ ತೆನೆ ವಿತರಣೆ ನಡೆಯಲಿದೆ.
ಮೂರು ದಿನವೂ ವೈದಿಕ ಧಾರ್ಮಿಕ,
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಳಿದ್ದು, ಒಡಿಯೂರು ಶ್ರೀ, ಸಚಿವ ಯು ಟಿ ಖಾದರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರಾದ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













