ಬಿ ಸಿ ರೋಡ್ :ಶತಾಯುಷಿ ಬಿ.ಎಸ್. ಕುಲಾಲ್‌ರ ಸೇವಾ ಬದುಕಿಗೆ ಸಾರ್ವಜನಿಕ ನುಡಿ ನಮನ

Coastal Bulletin
ಬಿ ಸಿ ರೋಡ್ :ಶತಾಯುಷಿ ಬಿ.ಎಸ್. ಕುಲಾಲ್‌ರ ಸೇವಾ ಬದುಕಿಗೆ ಸಾರ್ವಜನಿಕ ನುಡಿ ನಮನ

ಬಂಟ್ವಾಳ :ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಹಾಗೂ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ಸಹಯೋಗದಲ್ಲಿ  ಸಹಕಾರಿ ಭೀಷ್ಮ ಶತಾಯುಷಿ ಬಿ ಶಂಕರ ನಾರಾಯಣ ಕುಲಾಲ್ ರವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮ ಸೆ.10ರಂದು ಸಂಜೆ ಬಿ.ಸಿ ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು


ನುಡಿ ನಮನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಹಿಂದುಳಿದ ಸಮಾಜದಲ್ಲಿ ಹುಟ್ಟಿ ಸಾಮಾಜಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಸಣ್ಣ ಪ್ರಯತ್ನದಿಂದಲೇ ಸಮಾಜ ಸೇವೆಯ ಪಯಣ ಆರಂಭಿಸಿ, ಜೀವನದ ಕೊನೆಯವರೆಗೂ ಸಮುದಾಯ ಹಾಗೂ ಸಮಾಜದ ಸೇವೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡ ದಣಿವರಿಯದ ನಾಯಕ ಶತಾಯುಷಿ ಬಿ.ಎಸ್. ಕುಲಾಲ್ ನಡೆದ ಹಾದಿ ಸಮಾಜಕ್ಕೆ ಪ್ರೇರಣೆ ಎಂದರು.

ಬಾ ಜ ಪಾ ಜಿಲ್ಲಾ ಮುಖಂಡ ರಾಮದಾಸ್ ಬಂಟ್ವಾಳ ಮಾತನಾಡಿ, ಒಳ್ಳೆಯ ಮನೋಧರ್ಮದ ವ್ಯಕ್ತಿಯಾಗಿದ್ದ ಅವರು ಸತ್ಯ, ನ್ಯಾಯ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಜೀವನದ ಮೌಲ್ಯಗಳನ್ನಾಗಿ ಮಾಡಿಕೊಂಡು ಬದುಕಿದವರು. ಸಮುದಾಯ ಹಾಗೂ ಸಮಾಜದಲ್ಲಿ ಎಲ್ಲರೂ ಸಹಬಾಳ್ವೆ, ಒಗ್ಗಟ್ಟು ಮತ್ತು ಪರಸ್ಪರ ಗೌರವದಿಂದ ಬದುಕಬೇಕೆಂಬ ಆಶಯದೊಂದಿಗೆ ನಿರಂತರವಾಗಿ ಪ್ರಯತ್ನಿಸಿದವರು ಎಂದರು

ಡಾ.ಅಣ್ಣಯ್ಯ ಕುಲಾಲ್ ಮಾತನಾಡಿ, ಸಮಾಜದ ಏಳಿಗೆಗೆ ಜೀವನವನ್ನು ಮುಡಿಪಾಗಿಟ್ಟು ನೂರು ವರುಷಗಳ ಕಾಲ ಸತ್ಯಕ್ಕೆ ನ್ಯಾಯ, ನಿಷ್ಠೆಗೆ ರಹದಾರಿಯಾಗಿ ಸ್ವತಂತ್ರ

ಜೀವನ ನಡೆಸಿದರು ಎಂದರು.

ಪ್ರಮುಖರಾದ ಸುಭಾಶ್ಚಂದ್ರ ಜೈನ್, ಸೋಮಯ್ಯ ಹನೈನಡೆ,ಅಶೋಕ್ ಕುಲಾಲ್,ಲ.ಅನಿಲ್ ದಾಸ್, ಸದಾಶಿವ ಬಂಗೇರ,ಮಚ್ಚೆದ್ರ ಸಾಲ್ಯಾನ್ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿಶ್ರೀ ರಕ್ತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಿ ಮೋಹನ್,ರಮೇಶ್ ಬಾಳೆಹಿತ್ತಿಲು, ಗಿರೀಶ್ ವೇಣೂರು , ಬೂಬಣ್ಣ ವಿಕಾಸ್ ಐಸ್ ಕ್ರಿಮ್, ರಮೇಶ್ ಪಣೋಲಿಬೈಲ್,ಸುರೇಶ್ ಮಂಗಳೂರು,ಪುರುಷೋತ್ತಮ ಹಾಲಾಡಿ,ವೇದಿಕೆ ವಿಭಾಗಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ಗಂಗಾಧರ್  ಬಂಜನ್, ಸುಧಾಕರ್ ಸುರತ್ಕಲ್ ನವೀನ್ ಮುಡಿಪು, ಸ್ಟಿವನ್ ಬೊಳ್ಳಯಿ, ಸುಮಿತ್ ಸಾಲಿಯಾನ್,ನಾರಾಯಣ ಹೊಸ್ಮಾ ರ್, ನಿತೀಶ್ ಪಲ್ಲಿಖಂಡ, ಪುನೀತ್ ಕಾಮಾಜೆ,ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಭಾರತಿ ಶೇಷಪ್ಪ, ಸದಸ್ಯರಾದ ವಸಂತಿ ಭೋಜ ಸಾಲಿಯಾನ್, ಸೌಮ್ಯ ಸುಕುಮಾರ್, ಹಿರಿಯ ನಾಗರೀಕ ಸಂಘದ ಶೇಷಪ್ಪ ಮಾಸ್ಟರ್, ಶ್ರೀನಿವಾಸ್ ಖಂಡಿಗ ,ಪದ್ಮನಾಭ ಎಂ. ವಿಶ್ವನಾಥ್ ಸೋರ್ನಾಡು, ರತ್ನಾವತಿ ಎಂ.,ವೇದಿಕೆಯ ಹಲವು ಸದಸ್ಯರು ಮತ್ತು  ಬಿ. ಎಸ್  ಕುಲಾಲ್ ರವರ   ಕುಟುಂಬಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಹಾಜರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.ಕಲಾವಿದ ಹೆಚ್ ಕೆ ನೈನಾಡ್ ಕಾರ್ಯಕ್ರಮ ನಿರೂಪಿಸಿದರು.

Leave a Comment