ಬಂಟ್ವಾಳ :ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಅಧ್ಯಾಪಕರಾಗಿ 45 ವರ್ಷಗಳಿಗೂ ಹೆಚ್ಚು ಕಾಲ ಶ್ರೀ ಸತ್ಯ ಸಾಯಿ ವಿದ್ಯಾ ಕೇಂದ್ರ ಅಳಿಕೆ ಯಲ್ಲಿ ಸೇವೆ ಸಲ್ಲಿಸಿ ಅಸಂಖ್ಯಾತ ಮಕ್ಕಳಿಗೆ ವಿದ್ಯಾದಾನ ಮಾಡಿ ನಿವೃತ್ತರಾದ ಮಂಚಿಯ ಜಾರಪ್ಪ ಮೂಲ್ಯ ಕೆ ಇವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ವೇದಿಕೆಯ ವಿಭಾಗಿಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಬಂಟ್ವಾಳ ವೇದಿಕೆಯ ಕೋಶಾದಿಕಾರಿ ಸಂತೋಷ್ ಮಯ್ಯರಬೈಲ್ ಜಿಲ್ಲಾ ವಲಯ ಪ್ರತಿನಿಧಿ ನಿತೀಶ್ ಪಲ್ಲಿಕಂಡ, ಮಾಜಿ ಗೌರವಾಧ್ಯಕ್ಷ ನಾರಾಯಣ ಹೊಸ್ಮಾರ್, ಗೌರವಾಧ್ಯಕ್ಷ ಎಚ್ಕೆ ನಯನಾಡು, ಗೌರವ ಸಲಹೆಗಾರ ಸೇಷಪ್ಪ ಮಾಸ್ಟರ್, ಗಣೇಶ್ ಕುಲಾಲ್ ಕಾಮಾಜೆ,ಪುರುಷೋತ್ತಮ ಹಾಲಾಡಿ,ಮಾಜಿ ಅಧ್ಯಕ್ಷ ಸಂತೋಷ್ ಮರ್ತಾಜೆ, ಸೌಮ್ಯ ಸುಕುಮಾರ್,
ಜೀವನ್ ಭಂಡಾರಿಬೆಟ್ಟು, ಪುನೀತ್ ಕಾಮಾಜೆ,ಹಾಗೂ ಮಂಚಿ-ಇರಾ ಕುಲಾಲ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ತಿತರಿದ್ದರು.
ಸನ್ಮಾನಿತರ ಅಳಿಯ ಪ್ರಾಧ್ಯಾಪಕ ಡಾ.ಲೋಕೇಶ್ ನಾರ್ಶ ಸ್ವಾಗತಿಸಿ, ಶೇಷಪ್ಪ ಮಾಸ್ತರ್ ಪ್ರಸ್ತಾವಿಸಿದರು. ಸನ್ಮಾನಿತರು ಇಂಗ್ಲಿಷ್ ಅಧ್ಯಾಪಕರರಾಗಿ ಸೇವೆ ಸಲ್ಲಿಸಿದ್ದು. Love All Serve All ಎಂಬ ವಾಕ್ಯವನ್ನು ಉಲ್ಲೇಖಿಸಿ ಯುವವೇದಿಕೆಯ ಸದಸ್ಯರಿಗೆ ಹಿತವಚನ ನೀಡಿದರು. ಸುಕುಮಾರ್ ಬಂಟ್ವಾಳ ಸಂಧರ್ಬೋಚಿತವಾಗಿ ಮಾತನಾಡಿದರು.















