ಟೇಬಲ್ ಟೆನ್ನಿಸ್‌ನಲ್ಲಿ ಬಂಟ್ವಾಳದ ಪ್ರತಿಭೆಯ ಸಾಧನೆ : ಇಶ ಅನ್ವಿಗೆ ರಾಜ್ಯಮಟ್ಟದ 2ನೇ ಸ್ಥಾನ.

Coastal Bulletin
ಟೇಬಲ್ ಟೆನ್ನಿಸ್‌ನಲ್ಲಿ ಬಂಟ್ವಾಳದ ಪ್ರತಿಭೆಯ ಸಾಧನೆ : ಇಶ ಅನ್ವಿಗೆ ರಾಜ್ಯಮಟ್ಟದ 2ನೇ ಸ್ಥಾನ.

ಬಂಟ್ವಾಳ: ವಿದ್ಯಾಭಾರತಿ ಕರ್ನಾಟಕ ವತಿಯಿಂದ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಆ.29ರಂದು ನಡೆದ ಪ್ರಾಂತೀಯ ಕ್ರೀಡಾಕೂಟ 2026-27ರ ಅಂಡರ್‌-17 ಬಾಲಕಿಯರ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟ್‌ನಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಕು. ಇಶ ಅನ್ವಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇಶ ಅನ್ವಿ ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆ ನಿವಾಸಿ ಕುಂಬಾರರ ಗುಡಿ ಕೈಗರಿಕಾ ಸಹಕಾರ ಸಂಘದ ಮಾಜಿ ನಿರ್ದೇಶಕಿ ಹಾಗೂ ಕೃಷಿಕರಾದ ಶುಭಾ ಬಂಜನ್ ಮತ್ತು ಮಂಗಳೂರಿನ ಇಂಜಿನಿಯರ್ ಹಾಗೂ ಸಾಹಿತಿ ಡಾ. ಆನಂದ್ ಬಂಜನ್ ಅವರ ಪುತ್ರಿ.

ಇವರು 2023-24ನೇ ಸಾಲಿನಲ್ಲೂ

ಕುಲಶೇಖರ ಸೇಕ್ರೆಟ್ ಹಾರ್ಟ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ  ಹಾಗೂ ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ ಟಿ.ಟಿ ಟೂರ್ನಮೆಂಟ್ನಲ್ಲಿ ಭಾಗವಹಿದ್ದರು.

ಕ್ರೀಡಾಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಇಶ ಅನ್ವಿ ಅವರ ಈ ಯಶಸ್ಸಿಗೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Comment