ಬಂಟ್ವಾಳ :ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿ ಹಾಗೂ ಆಚರಣೆಯಲ್ಲಿ ನಮ್ಮ ಬದುಕನ್ನು ಬೆಸೆಯುವ ಕೊಂಡಿಗಳು ಹಾಗೂ ಇಂದಿನ ಈ ಕಾಲ ಘಟ್ಟದಲ್ಲಿ ನಮ್ಮ ಧಾರ್ಮಿಕ ಆಚರಣೆಯೊಳಗೆ ವೈಜ್ಞಾನಿಕ ವಿಚಾರಗಳು ಇದೆ ಇವುಗಳ ಹುಡುಕಬೇಕಿದೆ.ನಮ್ಮೊಳಗೆ ಧರ್ಮ ಜಾಗೃತಿ ಅಗತ್ಯವಿದೆ ಎಂದು ಧರ್ಮ ಜಾಗೃತಿ ಸಮನ್ವಯ ಡಾ.ಪ್ರಣಭ್ ಮಲ್ಯ ಕಿವಿ ಮಾತು ಹೇಳಿದರು.
ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ .ರಿ.ಕಮ್ಮಾಜೆ ಹಾಗೂ ಮಾತೃ ವೃಂದ ಕಮ್ಮಾಜೆ ಇವರ ಆಶ್ರಯದಲ್ಲಿ ಕಮ್ಮಾಜೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ 25 ನೇ ವರುಷ ಮೊಸರು ಕುಡಿಕೆ ಉತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನುಡಿದರು.
ಅಧ್ಯಕ್ಷತೆಯನ್ನು ನಿವೃತ್ತಿ ಶಿಕ್ಷಕರಾದ ಗಂಗಾಧರ ರೈ ವಹಿಸಿದ್ದು, ಭಜಗರಂಗ ದಳದ ಸಹ ಸಂಯೋಜಕರು ಸಂತೋಷ್ ಸರಪಾಡಿ, ಬಿಗ್ ಬಾಸ್ ,ಸ್ಪರ್ಧಿ,ಧನ್ ರಾಜ್ ಆಚಾರ್ಯ, ಹಿಂದೂ ಜಾಗರಣ ವೇದಿಕೆಯ ಪ್ರಣಿತ್ ವಾಮದಪದವು, ಕೆ ಎಂ ಎಫ್ ಮಂಗಳೂರಿನ ನಿರ್ದೇಶಕರು, ನಂದರಾಮ್ ರೈ, ಚೈತನ್ಯ ಶಿಕ್ಷಣ ಸಂಸ್ಥೆಯ ಸ್ಪಾಪಕರು ಶ್ರೀಮತಿ ವಿಜೇತಾ ಅಮೀನ್, ತೆಂಕಬೆಳ್ಳೂರು ಬಿ.ಜೆ.ಪಿ ಸಂಚಾಲಕರು ಮುರಳಿಧರ ಶಟ್ಟಿ, ಸ್ಥಳ ದಾನಿ ಶ್ರೀ ನಾರಾಯಣ ಪೊಯ್ಯ,ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷರು ಶ್ರೀ ವಸಂತ M
ಜೈ ತುಳುನಾಡ್ ಸಂಘದ ಗೌರವ ಅಧ್ಯಕ್ಷರು ಜಗದೀಶ್ ರೈ,ಕಾವೇಶ್ವರ ಭಕ್ತ ವೃಂದದ ಅಧ್ಯಕ್ಷರು ಸುರೇಶ್, ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಗಣೇಶ್ ಕುಮಾರ್, ಉಪಸ್ಥಿತರಿದ್ದರು.
ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು,ಧಾರ್ಮಿಕ ಮುಖಂಡರು ಸತ್ಯ ಜಿತ್ ಸುರತ್ಕಲ್, ದಕ್ಷಿಣ ಕನ್ನಡ ಜಿಲ್ಲೆಯ ಬಿ.ಜೆ.ಪಿ ಜಿಲ್ಲಾ ವಕ್ತಾರರಾದ ಶ್ರೀ ಮಾಧವ ಮಾವೆ ಶುಭ ಹಾರೈಸಿದರು.
ಸಮಾಜಿಕ ಮುಖಂಡರಾದ ಸಂದೇಶ್ ಶೆಟ್ಟಿ ಅಗ್ರಜ ಕ್ರೀಡಾಂಗಣ ಉದ್ಘಾಟನೆ ನಡೆಸಿದರು.ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಊರಿನ ಸಾಧಕರನ್ನು ಹಾಗೂ ಸಮಾಜಮುಖಿ ಚಿಂತಕರನ್ನು ಸನ್ಮಾನಿಸಲಾಯಿತು.
ಊರ ಪರ ಊರ ಬಂಧುಗಳಿಗೆ ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಯನ್ನು ನಡೆಸಲಾಯಿತು.
ಸಂಘ ಕೋಶಾಧಾರಿ ತಿರುಲೇಶ್ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿದರು.ಸುರೇಶ್. ಎಸ್.ನಾವೂರು ಧಾರ್ಮಿಕ ಸಭಾ ಕಾರ್ಯಕ್ರಮ ನಿರೂಪಿಸಿದರು..ರಂಜಿತ್ ಕಮ್ಮಾಜೆ, ದಿಶಾ ಕಮ್ಮಾಜೆ ದಿನೇಶ್ ವರಕೋಡಿ ಕ್ರೀಡಾ ಚಟುವಟಿಕೆ ನೇವರಿಸಿದರು.ರಾಜೇಶ್ ವಂದಿಸಿದರು.















