ಪಕ್ಕಳಪಾದೆ:ಸರಸ್ವತಿ ಭಜನಾ ಮಂದಿರದಲ್ಲಿ  ಸಮಾಲೋಚನೆ ಸಭೆ. ನವರಾತ್ರಿ ಆಚರಣಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ.

Coastal Bulletin
ಪಕ್ಕಳಪಾದೆ:ಸರಸ್ವತಿ ಭಜನಾ ಮಂದಿರದಲ್ಲಿ  ಸಮಾಲೋಚನೆ ಸಭೆ. ನವರಾತ್ರಿ ಆಚರಣಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ.

ಬಂಟ್ವಾಳ :ಶ್ರೀ ಸರಸ್ವತಿ ಭಜನಾ ಮಂದಿರ ಟ್ರಸ್ಟ್  ಸರಸ್ವತಿ ನಗರ, ಪಕ್ಕಳಪಾದೆ ಮೇರಮಜಲು ಇದರ  ತ್ರೈಮಾಸಿಕ ಸಭೆ ಹಾಗೂ 10ನೇ ವರುಷದ ನವರಾತ್ರಿ ಆಚರಣೆ, ಅರ್ಧ ಏಕಾಹ ಭಜನೋತ್ಸವದ ಕುರಿತು ಸರ್ವ ಸದಸ್ಯರ ಸಮಾಲೋಚನಾ ಸಭೆ ಟ್ರಸ್ಟಿನ ಹರೀಶ್ ನಾಲದೆ , ಹರೀಶ್ ಪಾದೆಮಾರ್ , ಬಾಬು ಮಯ್ಯಾಡಿ (ಟ್ರಸ್ಟಿಗಳು)ಇವರ ನೇತೃತ್ವದಲ್ಲಿ  ನಡೆಸಲಾಯಿತು.

ಸಭೆಯಲ್ಲಿ  ಮಂದಿರದ ಅಧ್ಯಕ್ಷ ದೀಕ್ಷಿತ್ ಪಕ್ಕಳಪಾದೆ ಗೌರವಾಧ್ಯಕ್ಷ ವಸಂತ   ಬಡ್ಡೂರು ಮಹಿಳಾ ಅಧ್ಯಕ್ಷೆ ಸುಗಂಧಿ ಇವರ ಗೌರವ ಉಪಸ್ಥಿತಿಯಲ್ಲಿ ಸರ್ವಸದಸ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು.

10ನೇ ವರುಷದ ನವರಾತ್ರಿ ಆಚರಣೆ ಹಾಗೂ ಅರ್ಧ ಏಕಾಹ ಭಜನೋತ್ಸವಕ್ಕೆ

ಉತ್ಸವ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು  ಜಾರಪ್ಪ ಪಕ್ಕಳಪಾದೆ,ಅಧ್ಯಕ್ಷ  ದಿನೇಶ್ ಪಕ್ಕಳಪಾದೆ,ಉಪಾಧ್ಯಕ್ಷರು ನಾಗೇಶ್ ಪಕ್ಕಳಪಾದೆ,ಕಾರ್ಯದರ್ಶಿಗಳು :ಪ್ರವೀಣ್ ಮಯ್ಯಾಡಿ, ಅಕ್ಷಯ್ ಪಕ್ಕಳಪಾದೆ, ಕೋಶಾಧಿಕಾರಿ ಕೇಶವ ಬಡ್ಡೂರು,ಪ್ರಚಾರ ಸಮಿತಿ  ಹರ್ಷಿತ್ ಸರಸ್ವತಿ ನಗರ, ಸೌರಾಜ್ ಮಯ್ಯಾಡಿ ಆಯ್ಕೆಯಾದರು.

Leave a Comment