breaking news

ಕರಾಟೆಯಲ್ಲಿ ಬಂಟ್ವಾಳದ ತನ್ವಿ ಆರ್.ಸುವರ್ಣ ರಾಜ್ಯಮಟ್ಟಕ್ಕೆ ಆಯ್ಕೆ.

Coastal Bulletin
ಕರಾಟೆಯಲ್ಲಿ ಬಂಟ್ವಾಳದ ತನ್ವಿ ಆರ್.ಸುವರ್ಣ ರಾಜ್ಯಮಟ್ಟಕ್ಕೆ ಆಯ್ಕೆ.

ಬಂಟ್ವಾಳ: ದ.ಕ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಬೆಳ್ಳಾರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ತನ್ವಿ ಆರ್.ಸುವರ್ಣ ಅವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅವರು ಸತತ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿದ್ದಾರೆ. 2024ನೇ ಸಾಲಿನಲ್ಲಿ ಮೈಸೂರಿನಲ್ಲಿ ನಡೆದ ‌ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಜತೆಗೆ

ವಾಲಿಬಾಲ್ ಆಟಗಾರ್ತಿಯಾಗಿಯೂ ಗುರುತಿಕೊಂಡಿದ್ದಾರೆ.

ಅವರು ಬಂಟ್ವಾಳದ ರಾಜೇಶ್ ಜಿ.ಸುವರ್ಣ ಹಾಗೂ ಸುಪ್ರಿತ ಆರ್.ಸುವರ್ಣ ಅವರ ಪುತ್ರಿಯಾಗಿದ್ದು, ಬಂಟ್ವಾಳ ಅಶೋಕ್ ಆಚಾರ್ಯ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

Leave a Comment