ಬಂಟ್ವಾಳ :ತಾಲೂಕಿನ ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ 81ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸೆ.05ನೇ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಅಪರಾಹ್ನ ಭಜನೆ ಬಳಿಕ ಸಂಜೆ ಶ್ರೀ ಕೃಷ್ಣ ಲೀಲೋತ್ಸವ, ಮುದ್ದು ಬಾಲಕೃಷ್ಣ ವೇಷ
ಸ್ಪರ್ಧೆ ಶಾಲಾ ಮಕ್ಕಳ ಮತ್ತು ಸ್ಥಳೀಯ ಅರಳು ಪ್ರತಿಭೆಗಳಿ೦ದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.















