ಬಂಟ್ವಾಳ :ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಯಯದ ವತಿಯಿಂದ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ದುಡಿದು ನಿವೃತ್ತರಾದ ಲಿಂಗಪ್ಪ ಮಾಸ್ತರ್ ದಂಪತಿಗಳನ್ನು ವಲಯಧ್ಯಕ್ಷರಾದ ಶ್ರೀ ರಾಜೇಂದ್ರ ಕೆ. ರವರು ವಲಯದ ಪದಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿದರು.
ಶ್ರೀ ಸುಕುಮಾರ್ ಬಂಟ್ವಾಳ್ ರವರು ಪ್ರಾಸ್ತಾವಿಕ ಮಾತಾನ್ನಾಡಿದರು. ಶ್ರೀ ವಿಕೆಶ್ ರವರು ಸನ್ಮಾನ ಪತ್ರವನ್ನು ಓದಿದರು.ಈ ಸಂದರ್ಭದಲ್ಲಿ SKP ವಿವಿದೊದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ಹರೀಶ್ ಟಿ. ರಾವ್,
ಗೌರವಧ್ಯಕ್ಷರಾದ ಶ್ರೀ ಕಿಶೋರ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಶ್ರೀ ಹರೀಶ್ ಕುಂದರ್, ಶ್ರೀ ಹರೀಶ್ ನಾಟಿ, ಶ್ರೀ ಕೃಷ್ಣರಾಜ್ ರಾವ್ ರವರು ಉಪಸ್ಥಿತರಿದ್ದರು.
ಅತಿಥಿಗಳನ್ನು ರಾಜೇಂದ್ರ ಕೆ. ಸ್ವಾಗತಿಸಿ, ಕೃಷ್ಣರಾಜ್ ರಾವ್ ರವರು ಧನ್ಯವಾದವಿತ್ತರು.
















