ಬಂಟ್ವಾಳ :ಕೊಡ್ಮಾಣ್ ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಇದರ ವತಿಯಿಂದ ಜರುಗುವ 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಸಮಾಲೋಚನಾ ಸಭೆ ಸೆ.06ರಂದು ಕೊಡ್ಮಾಣ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ 38ನೇ ವರ್ಷದ ಶಾರದಾ ಪೂಜಾ ಮಹೋತ್ಸಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಶೆಟ್ಟಿ(ಜಿ.ಕೆ) ಕೊಡ್ಮಾಣ್. ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಕಲ್ಲಜಾಲ್, ಕೋಶಾಧಿಕಾರಿ ಸಚಿನ್ ಕುಮಾರ್ ಪಿಲಿಮಾರ್ ಸರ್ವಾನುಮತದಿಂದ ಆಯ್ಕೆಯಾದರು ಹಾಗೂ ಇತರ ಪದಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು,
ಸಭೆಯಲ್ಲಿ ಪ್ರಮುಖರಾದ ಸತೀಶ್ ನಾಯ್ಗ ಕೊಡ್ಮಾಣ್
ಕೋಡಿ, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಲಕ್ಷ್ಮಿಕಾಂತ್ ನಾಯಕ್ ಕೊಡ್ಮಾಣ್, ಪ್ರವೀಣ್ ಶೆಟ್ಟಿ ಪಾಪೆದಡಿ, ಗೋಪಾಲ್ ಗೋವಿಂದೋಟ, ರಾಧಾಕೃಷ್ಣ ತಂತ್ರಿ ಬೆಂಜನಪದವು ಸಂತೋಷ್ ಕೊಡ್ಮಾಣ್ ಕೋಡಿ, ಚೇತನ್ ಕಾಂಜಿಲಕೋಡಿ ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.















