ಬಂಟ್ವಾಳ : ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಬಿ.ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಕೆ. ಜಯಂತ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ಸದಸ್ಯರಿಗೆ ಶೇ. 25 ಲಾಭಾಂಶ ಪ್ರಕಟಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಗೀತಾ ವಿ ಹೊಳ್ಳರವರು ವಾರ್ಷಿಕ ವರದಿ ವಾಚಿಸಿದರು. ಗತ ವರ್ಷದಲ್ಲಿ 29601 •59 ಲಕ್ಷ ವ್ಯವಹಾರ ನಡೆಸಿ ರೂ. 77.96 ಲಕ್ಷ ಲಾಭ ಗಳಿಸಿ ಶೇ 99.75 ಸಾಲ ವಸೂತಿಯಾಗಿದ್ದು ಸಂಘವನ್ನು ಎ ತರಗತಿ ಎಂದು ವರ್ಗೀಕರಿಸಲಾಗಿದೆ.
ಕಾರ್ಯಾಕ್ರಮದಲ್ಲಿ ಸಾಧಕ ವಿದಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಿಲಾಯಿತು . ಸಂಘದ ಹಿರಿಯ
ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಸ್ಥಾಪಕರ ಭಾವಚಿತ್ರವನ್ನು ಅನಾವರಣ ಮಾಡಲಾಯಿತು.
ಸಂಘದ ಉಪಾಧ್ಯಕ್ಷರಾದ ಕೆ.ಎನ್ ಗಂಗಾಧರ ಆಳ್ವ , ನಿರ್ದೇಶಕರಾದ ಪದ್ಮನಾಭ ಬಿ , ಉಮಾವತಿ ಶೆಟ್ಟಿ , ಚಂದು ನಾಯ್ಕ , ಎನ್ ಶಿವಶಂಕರ್ ಶ್ರೀಧರ ಎನ್, ರಂಜಿತ್ ರವರು ಉಸಸಸ್ಥಿತರಿದ್ದರು. ಸಂಘದ ಅಧ್ಯಕ್ಷರು ಸ್ವಾಗತಿಸಿದರು. ನಿರ್ದೇಶಕರಾದ ಸುಬ್ರಾಯ ರಾಮ ಮಡಿವಾಳ್ ರವರು ವಂದಿಸಿದರು. ನಿರ್ದೇಶಕರಾದ ಸುನಿಲ್ ಪ್ರಾನ್ಸಿಸ್ ಲೂಯಿಸ್ ರವರು ಕಾರ್ಯಕ್ರಮ ನಿರೂಪಿಸಿದರು















