ತುಂಬೆ : 26ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ನಿಸರ್ಗ, ಕಾರ್ಯದರ್ಶಿಯಾಗಿ ಜಗನ್ನಾಥ್ ಸಾಲಿಯಾನ್ ತುಂಬೆ ಆಯ್ಕೆ.

Coastal Bulletin
ತುಂಬೆ : 26ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ನಿಸರ್ಗ, ಕಾರ್ಯದರ್ಶಿಯಾಗಿ ಜಗನ್ನಾಥ್ ಸಾಲಿಯಾನ್ ತುಂಬೆ ಆಯ್ಕೆ.

ಬಂಟ್ವಾಳ : ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ವತಿಯಿಂದ ನಡೆಯಲಿರುವ 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಸಭೆಗೆ ಮುನ್ನ ವಾರ್ಷಿಕ ಲೆಕ್ಕ ಪತ್ರ ಮಂಡನೆ ನಡೆಯಿತು.

ನೂತನ ಅಧ್ಯಕ್ಷರಾಗಿ ಕಿಶೋರ್ ನಿಸರ್ಗ ದೇಮುಂಡೆ, ಪ್ರಧಾನ ಕಾರ್ಯದರ್ಶಿಯಾಗಿ ಜಗನ್ನಾಥ್ ಸಾಲಿಯಾನ್ ತುಂಬೆ ಹಾಗೂ ಕೋಶಾಧಿಕಾರಿಯಾಗಿ ಸದಾನಂದ ಕೋಡಿಯಡ್ಕ ತುಂಬೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇತರ ಪದಾಧಿಕಾರಿಗಳ ವಿವರ :

ಉಪಾಧ್ಯಕ್ಷರಾಗಿ ಮನೋಜ್ ಆಚಾರ್ಯ ನಾಣ್ಯ, ಮಹಾಬಲ ಮಜಿ, ರೂಪೇಶ್ ಜ್ಯೋತಿಗುಡ್ಡೆ, ಉದಯ್ ರಾಮಲ್ ಕಟ್ಟೆ, ವಸಂತಿ ರಾಮಲ್ ಕಟ್ಟೆ, ಪ್ರಿಯಾ ಸತೀಶ್ ಕುಲಾಲ್ ಬೊಳ್ಳಾರಿ, ಜೊತೆ ಕಾರ್ಯದರ್ಶಿಯಾಗಿ ರವಿರಾಜ್ ರಾಮಲ್ ಕಟ್ಟೆ, ವಿಜೇತ್ ಗೋಮಾಯಿ, ಯುವರಾಜ್ ಹಳೆನೀರು, ಆದಿಶ್ ಮುದಲ್ಮೆ, ಸುಮನಾ ಸನತ್ ಪಡ್ಪು, ಮಮತಾ ಅರುಣ್ ಗಾಣದಲಚಿಲು ಇವರನ್ನು ಮತ್ತು

ಸಭೆಯಲ್ಲಿ ಗೌರವ ಸಲಹೆಗಾರರು ಮತ್ತು ನಾಮ ನಿರ್ದೇಶಿತ ಟ್ರಸ್ಟಿಗಳ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ಇದರ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಪ್ರಧಾನ ಕಾರ್ಯದರ್ಶಿ ದಿವಾಕರ ಪೆರ್ಲಬೈಲು, ಉಪಾಧ್ಯಕ್ಷೆ ಶೋಭಾ ಗೋಪಾಲ್ ಮೈoದಾನ್, ರಜತ ಮಹೋತ್ಸವದ ಅಧ್ಯಕ್ಷರಾದ ರಾಘವ ಬಂಗೇರ ಪೆರ್ಲಬೈಲ್, ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ, ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್ ಕಜೆಕಂಡ ಉಪಸ್ಥಿತರಿದ್ದರು. ಯೋಗೀಶ್ ಅಂಚನ್ ಕಜೆಕಂಡ ಸ್ವಾಗತಿಸಿದರು, ಸಂತೋಷ್ ಕೋಟ್ಯಾನ್ ಲೆಕ್ಕ ಪತ್ರ ಮಂಡಿಸಿದರು, ಸುಶಾನ್ ಬೊಳ್ಳಾರಿ ಕಾರ್ಯಕ್ರಮ ನಿರೂಪಿಸಿದರು.

Leave a Comment