ಬಿ.ಸಿ.ರೋಡ್  :ಶ್ರೀ ಸಾಯಿ ಕಿಡ್‌ಝೋನ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ.

Coastal Bulletin
ಬಿ.ಸಿ.ರೋಡ್  :ಶ್ರೀ ಸಾಯಿ ಕಿಡ್‌ಝೋನ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ.

ಬಂಟ್ವಾಳ : ಶ್ರೀ ಸಾಯಿ ಕಿಡ್‌ಝೋನ್ ವಿದ್ಯಾ ಸಂಸ್ಥೆಗಳು, ಬಿ.ಸಿ.ರೋಡ್ ಇದರ ಆಶ್ರಯದಲ್ಲಿ, ರೋಟರಿ ಕ್ಲಬ್ ಬಂಟ್ವಾಳ ಹಾಗೂ ಶ್ರೀ ಸಾಯಿ ಕಿಡ್‌ಝೋನ್ ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಸಹಯೋಗದಲ್ಲಿ ರೋಟರಿ ಕ್ಲಬ್ ಬಂಟ್ವಾಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ವೇಷ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ರಕ್ತೇಶ್ವರಿ ದೇವಿ ಸನ್ನಿಧಿ, ಬಿ.ಸಿ.ರೋಡ್ ಇದರ ಮಾಜಿ ಅಧ್ಯಕ್ಷರಾದ  ವಿಶ್ವನಾಥ್ ಬಿ. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷರಾದ ರವಿಚಂದ್ರ ಬಂಟ್ವಾಳ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ  ಬೇಬಿ ಕುಂದರ್, ರೋಟರಿ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ರವಿರಾಜ್ ಶೆಟ್ಟಿ, ರಾಜಲಕ್ಷ್ಮೀ ಟೆಕ್ಸ್ಟೈಲ್ಸ್, ಬಿ.ಸಿ.ರೋಡ್‌ನ  ರಾಜೇಶ್ ಸುವರ್ಣ, ಕುಂದಾಪುರ-ಉಡುಪಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಿವ ಪ್ರಸನ್ನ, ಹಾಗೂ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ವೀಕ್ಷಾ ನಿಶಾಂತ್ ಉಪಸ್ಥಿತರಿದ್ದರು.

ಶ್ರೀ ಸಾಯಿ ಕಿಡ್‌ಝೋನ್ ಸಂಸ್ಥೆಯ ಸಂಚಾಲಕ ಐತಪ್ಪ ಪೂಜಾರಿ ಅವರು ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಆರತಿ ಅಮೀನ್ ಅವರು ವಂದಿಸಿದರು. ಶಿಕ್ಷಕಿ ಪೂರ್ಣಿಮಾ ಅವರು

ಕಾರ್ಯಕ್ರಮವನ್ನು ನಿರೂಪಿಸಿದರು.

ಶಿಕ್ಷಕಿಯರಾದ ಪುಷ್ಪಲತಾ, ಗೀತಾ, ದಿವ್ಯಾ, ಮಮತಾ ಹಾಗೂ ಅಂಬಿಕಾ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸ್ಪರ್ಧೆಯನ್ನು ಮುದ್ದು ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ ಹಾಗೂ ಯಶೋದೆ ಕೃಷ್ಣ ಎಂಬ ಐದು ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ಒಟ್ಟು 90 ಸ್ಪರ್ಧಿಗಳು ಭಾಗವಹಿಸಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿ ಮುಖ್ಯೋಪಾಧ್ಯಾಯರಾದ ಚೇತನ, ಹಿರಿಯ ಪ್ರಾಥಮಿಕ ಶಾಲೆ ನಾಟಿ ಮುಖ್ಯೋಪಾಧ್ಯಾಯರಾದ  ಪ್ರಭಾವತಿ, ಹಾಗೂ ಹಿರಿಯ ಪ್ರಾಥಮಿಕ ಶಾಲೆ ಸಜೀಪ ಮುನ್ನೂರು ದೈಹಿಕ ಶಿಕ್ಷಣ ಶಿಕ್ಷಕಿ ಸುರೇಖ ಅವರು ಕಾರ್ಯನಿರ್ವಹಿಸಿದರು.

ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ವ್ಯವಸ್ಥೆ ಹಾಗೂ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದರು. ಮಕ್ಕಳ ಮನಮೋಹಕ ಕೃಷ್ಣ ವೇಷಗಳು ಹಾಗೂ ವೈವಿಧ್ಯಮಯ ಪ್ರದರ್ಶನಗಳು ನೆರೆದಿದ್ದವರ ಮನಸೆಳೆದವು.

Leave a Comment