ಬಂಟ್ವಾಳ :ದೀಪಿಕಾ ಪ್ರೌಢಶಾಲೆ ಮೊಡಂಕಾಪು ಇಲ್ಲಿ ಸೆ. 9ರಂದು ರಂದು "ವಜ್ರ ದೀಪಿಕಾ" ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಶಿಕ್ಷಕರ ದಿನಾಚರಣೆ ನಡೆಯಿತು.
ಶಾಲಾ ಹಿರಿಯ ವಿದ್ಯಾರ್ಥಿ ವಜ್ರ ಮಹೋತ್ಸವ ಸಂಭ್ರಮ ಸಮಿತಿಯ ಅಧ್ಯಕ್ಷರಾದ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ಶಾಲಾ ಸಂಚಾಲಕರಾದ ಫಾದರ್ ವಲೇರಿಯನ್ ಡಿಸೋಜ ಅವರು ಸಂಚಿಕೆ ಬಿಡುಗಡೆ ಗೊಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕರಾದ ಹಾಗೂ "ವಜ್ರ ದೀಪಿಕಾ" ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾದ ಮಹಾಬಲೇಶ್ವರ ಹೆಬ್ಬಾರ್ ಇವರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂದನೀಯ ಫಾದರ್ ವಿಕ್ಟರ್ ಡಿಸೋಜ ಅಡಳಿತ ಮಂಡಳಿಯ ಸದಸ್ಯರುಗಳಾದ ಅಶ್ವನಿ ಕುಮಾರ್ ರೈ ,ಮಹಮ್ಮದ್ ವಳವೂರು , ಜೋನ್ ಗೊಮ್ಸ್ ,ಟ್ರೀಝ ಡಿಮೆಲ್ಲೊ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಚಂಚಲ ,ನಿಕಟಪೂರ್ವ ಅಧ್ಯಕ್ಷರುಗಳಾದ ಅನಿಲ್ ಫ್ರಾಂಕ್,
ಪ್ರಭಾಕರ್, ಸಲಿಂ,ಹಿರಿಯ ವಿದ್ಯಾರ್ಥಿಗಳಾದ ಶಿವಪ್ರಸಾದ್ ಪ್ರಭು , ವಿಲ್ಸನ್ ಪ್ರಕಾಶ್, ನಿವೃತ್ತ ಹಿರಿಯ ಶಿಕ್ಷಕರುಗಳಾದ ಟಿ ಬಾಬುಗೌಡ , ನಾರಾಯಣ ಹೆಬ್ಬಾರ್, ಮುಖ್ಯ ಶಿಕ್ಷಕ ಸಾಧು ಸರ್ವರನ್ನು ಸ್ವಾಗತಿಸಿದರು, ಹಿರಿಯ ಶಿಕ್ಷಕ ತಿಪ್ಪೇಸ್ವಾಮಿ ಆರ್ ಪ್ರಸ್ತಾವನೆಗೈದರು ಇನ್ಫೆಂಟ್ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ಸುನೀಲ್ ಲೂವಿಸ್ ಇವರು ಕಾರ್ಯಕ್ರಮ ನಿರ್ವಹಿಸಿದರು, ಶಾಲಿನಿ ಸರ್ವರನ್ನು ವಂದಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತ ಶಿಕ್ಷಕರನ್ನು ಬಹುಮಾನ ನೀಡುವುದರ ಮೂಲಕ ಗುರು ಕಾಣಿಕೆಯನ್ನು ನೀಡಿ ಶಿಕ್ಷಕ-ರಕ್ಷಕ ಸಂಘದವರು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.















