ಬಂಟ್ವಾಳ :ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ (ರಿ.) ತುಂಬೆ ಇವರ ಆಶ್ರಯದಲ್ಲಿ, ತುಂಬೆ ಗ್ರೂಪ್ ಅಜ್ಮಾನ್ ಯು.ಎ.ಇ ಇದರ ಸಂಸ್ಥಾಪಕರಾದ ಡಾI ತುಂಬೆ ಮೊಯಿದಿನ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.13ನೇ ಆದಿತ್ಯವಾರದಂದು ತುಂಬೆ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ನುರಿತ ವೈದ್ಯರ ನೇತೃತ್ವದಲ್ಲಿ ಕಣ್ಣಿನ ತಪಾಸಣೆ, ಸ್ತ್ರೀ ರೋಗ ತಪಾಸಣೆ, ಬಿ. ಪಿ, ಶುಗರ್ ಹಾಗೂ ಇತರ ಸಾಮಾನ್ಯ ಕಾಯಿಲೆಗಳ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ನೀಡಲಾಗುವುದು. ಅಗತ್ಯವುಳ್ಳವರಿಗೆ ಉಚಿತ ಔಷಧಿಯನ್ನು ಕೂಡ ವಿತರಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ
ವಿನಂತಿ. ಶಿಬಿರದಿಂದ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆ ಇರುತ್ತದೆ.
ಶಿಬಿರಕ್ಕೆ ಬರುವವರಿಗೆ ತುಂಬೆ ಜಂಕ್ಷನ್ ಹಾಗೂ ಫರಂಗಿಪೇಟೆಯಿಂದ ಬೆಳಿಗ್ಗೆ 10.30 ಹಾಗೂ 11.30 ಕ್ಕೆ ಉಚಿತ ವಾಹನ (ಬಿ .ಎ ಶಾಲಾ ಬಸ್) ಸೌಕರ್ಯವಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಯೋಜಕರು ತಿಳಿಸಿರುತ್ತಾರೆ.













